ಸಮಾಜಮುಖಿ ಸೇವೆಯ ಮೂಲಕ ಗುರುತಿಸಿಕೊಂಡಿರುವ ಭಾರತೀಯ ಕುಟುಂಬ ಯೋಜನಾ ಸಂಘ ಕುಮಟಾಕ್ಕೆ ತೀರಾ ಅಗತ್ಯವಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ್ದು ಇವುಗಳ ಹಸ್ತಾಂತರ ಪ್ರಕ್ರಿಯೆ ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಕೆನರಾ ಬ್ಯಾಂಕ್ ನ ಡಾ. ಎವಿ ಬಾಳಿಗಾ ಕಾಲೇಜು ಶಾಖೆಯ ಮ್ಯಾನೇಜರ್ ಶ್ರೀಮತಿ ರಂಜಿತಾ ತಿವಾರಿಯವರು ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷರಾದ ಡಾ. ಅಶೋಕ್ ಭಟ್ ಹಳಕಾರ್ ಅವರಿಗೆ ಹಸ್ತಾಂತರಿಸಿ ಮಾತನಾಡಿ ಉತ್ತಮ ಕಾರ್ಯಕ್ಕೆ ಬೆಂಬಲವಾಗಿ ನಿಂತ ಸಮಾಧಾನ ನಮಗಿದೆ. ಇದಕ್ಕೆ ಕಾರಣೀಕರ್ತರಾದ ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಶ್ರೀ ಮಂಜುನಾಥ ಪಂಡಿತ್ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ಲೆಕ್ಕಾಧಿಕ್ಷಕರಾದ ಶ್ರೀ ಜಿ .ಕೆ. ಭಟ್ ಸೂರಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷರಾದ ಡಾಕ್ಟರ್ ಅಶೋಕ್ ಭಟ್ ಹಳಕಾರ್ ಇವರು ಕೊಡುಗೆ ನೀಡಿದ ಕೆನರಾ ಬ್ಯಾಂಕಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘ ಕುಮಟಾದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿಎಂ ಪೈರವರ ಮಗ ಶ್ರೀ ಎಮ್. ಬಿ. ಪೈ, ಆರ್ಟ್ ಆಫ್ ಲಿವಿಂಗ್ ನ ರಾಜ್ಯ ಸಂಚಾಲಕರಾದ ಶ್ರೀಮತಿ ದೀಪಿಕಾ, ಡಾ. ಕೃಷ್ಣಾನಂದ, ಡಯಾಲಿಸಿಸ್ ಸೆಂಟರ್ ನ ಐಶ್ವರ್ಯ ಮತ್ತು ಅವಿನಾಶ್ ,ಮ್ಯಾನೇಜರ್ ಸಂತಾನ್ ಲೋಪೀಸ್, ಲೆಕ್ಕಾಧೀಕ್ಷಕರಾದ ಜಿ.ಕೆ. ಭಟ್ ಸೂರಿ ಉಪಸ್ಥಿತರಿದ್ದರು. ಸಂಘದ ಸದಸ್ಯ ಶ್ರೀ ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

