ಗೋಕರ್ಣ : ಭಾರತವು ಪರಮವೈಭದಲ್ಲಿದ್ದ ಕಾಲದಲ್ಲಿ ಯಾವ ವಿದ್ಯಾಪದ್ಧತಿ ಇದ್ದಿತೋ, ಭಾರತವನ್ನು ಭಾರತವಾಗಿಸಿದ ಮಹಾಪುರುಷರಿಗೆ ಯಾವುದು ವಿದ್ಯೆಯಾಗಿ ನೀಡಲ್ಪಟ್ಟಿತ್ತೋ ಅದನ್ನೇ ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ನೀಡುವುದು. ಜೊತೆಯಲ್ಲಿ ವಿದ್ಯಾರ್ಥಿಯು ಆಧುನಿಕ ಜಗತ್ತಿಗೆ ಅಪ್ರಸ್ತುತನಾಗದಂತೆ ಸಮಯುಗದ ಭಾಷೆಗಳು, ತಂತ್ರಜ್ಞಾನ, ವಿಜ್ಞಾನ, ಲೋಕಜ್ಞಾನ, ಸಂವಿಧಾನಗಳ ಶಿಕ್ಷಣವನ್ನೂ ನೀಡುವ ಘನತರ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಗೋಕರ್ಣದಲ್ಲಿ ನಡೆಯುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ನ ಅಂಗವಾದ ಸಾರ್ವಭೌಮ ಗುರುಕುಲಮ್ ಗೆ ಶ್ರೀಗಳ ನಿರ್ದೇಶನದಂತೆ ನೂತನ ಶಾಲಾಡಳಿತ ಸಮಿತಿ ರಚನೆಯಾಗಿದೆ. ಇತ್ತೀಚಿಗೆ ನೂತನ ಶಾಲಾಡಳಿತ ಸಮಿತಿ ಸದಸ್ಯರು ಶ್ರೀಗಳಿಂದ ಮಂತ್ರಾಕ್ಷತೆ ಪಡೆದು, ಕಾರ್ಯಕ್ಕೆ‌ ನಿಯುಕ್ತಿಗೊಂಡರು.

ನೂತನ ಶಾಲಾಡಳಿತ ಸಮಿತಿಯ ಅಧ್ಯಕ್ಷರಾಗಿ ಅರುಣ ಎನ್. ಹೆಗಡೆ ಕುಮಟಾ, ಕಾರ್ಯದರ್ಶಿಯಾಗಿ ಅಶ್ವಿನಿ ಉಡುಚೆ ನಿಯೋಜಿತರಾಗಿದ್ದಾರೆ. ಜೊತೆಗೆ ವಿವಿಧ ಸಂಚಾಲನಾ ಸಮಿತಿ ರಚಿಸಿದ್ದು ಪದವಿಪೂರ್ವ ವಿಭಾಗದ ಶಿಕ್ಷಣ ಸಮಿತಿಗೆ
ಸಂಚಾಲಕರಾಗಿ ವಿ. ಎಸ್. ಹೆಗಡೆ ಗುಡೇಅಂಗಡಿ, ಸದಸ್ಯರಾಗಿ ವೆಂಕಟೇಶ ಮಂಜುಳಗಿರಿ ಕಾರವಾರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಣ ಸಮಿತಿ ಸಂಚಾಲಕರಾಗಿ ಗಣೇಶ ಜೋಶಿ ಸಂಕೊಳ್ಳಿ, ಸದಸ್ಯರಾಗಿ ಈಶ್ವರ ಭಟ್ ಅಮಗೆರೆ, ಪೂರ್ವ ಪ್ರಾಥಮಿಕ ವಿಭಾಗದ ಸಮಿತಿಗೆ ಸಂಚಾಲಕರಾಗಿ ತ್ರಿವೇಣಿ ಯಾಜಿ, ಹಾಗೂ ಸದಸ್ಯರಾಗಿ ಗೀತಾ ಯಾಜಿ ಆಯ್ಕೆಯಾಗಿದ್ದಾರೆ.

RELATED ARTICLES  ಏ.6 ಕ್ಕೆ ಮಂಜುಗುಣಿ ರಥೋತ್ಸವ.
Disha Enterprise

ಕಟ್ಟಡ ನಿರ್ವಹಣಾ ವಿಭಾಗಕ್ಕೆ ಸಂಚಾಲಕರಾಗಿ ಕೃಷ್ಣಾನಂದ ಭಟ್ಟ ಹೊಳೆಗದ್ದೆ, ಸದಸ್ಯರುಗಳಾಗಿ ಗಣೇಶ ಭಟ್ಟ ಹರೀಟೆ, ಗಣೇಶ ಹೆಗಡೆ ಆರ್ಕೊಡ್ಲು, ಉದ್ಯಾನ ವನ ಹಾಗೂ ಒಪ್ಪ ಓರಣ ವಿಭಾಗದ ಸಂಚಾಲಕರಾಗಿ ಸ್ವಾತಿ ಭಾಗ್ವತ್
ಸದಸ್ಯರುಗಳಾಗಿ ಲಲಿತಾ ಹೆಬ್ಬಾರ್,ಗಣೇಶ ಭಟ್ಟ, ಭದ್ರತೆ ಮತ್ತು ವಾಹನ ನಿರ್ವಹಣೆಯ ವಿಭಾಗಕ್ಕೆ ಸಂಚಾಲಕರಾಗಿ ಗಣೇಶ ಹೆಗಡೆ ಆರ್ಕೊಡ್ಲು, ಆರೋಗ್ಯ ವಿಭಾಗದ
ಸಂಚಾಲಕರಾಗಿ ಡಾ. ರವಿ ಹಾಗೂ ಸದಸ್ಯರಾಗಿ ಡಾ. ನಾಗರಾಜ ಭಟ್ಟ ಹೊಲನಗದ್ದೆ, ವಸತಿ ನಿಲಯ ಮತ್ತು ಆಹಾರ ವಿಭಾಗದ ಸಂಚಾಲಕರಾಗಿ ಎನ್.ಜಿ. ಭಟ್ ಹೆರವಟ್ಟಾ, ಸದಸ್ಯರಾಗಿ ಗೀತಾ ಯಾಜಿ, ಲಲಿತಾ ಹೆಬ್ಬಾರ್ ಲೆಕ್ಕಪತ್ರ ಮತ್ತು ಉಗ್ರಾಣ ವಿಭಾಗದ ಸಂಚಾಲಕರಾಗಿ ಜೀ.ವಿ. ಹೆಗಡೆ. ಗೋಕರ್ಣ, ಸದಸ್ಯರಾಗಿ ವಿನಾಯಕ ಸಭಾಹಿತ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾಗಿ ಶೀಲಾ ಹೊಸ್ಮನೆ, ಸದಸ್ಯರಾಗಿ ಸ್ವಾತಿ ಭಾಗ್ವತ್ ಆಯ್ಕೆಯಾಗಿದ್ದಾರೆ.

RELATED ARTICLES  ಕಾರವಾರದಲ್ಲಿ ಜೈವಿಕ ಇಂಧನ ಸಪ್ತಾಹ ಆಚರಣೆಯ ಅಂಗವಾಗಿ ನಡೆಯಲಿವೆ ವಿವಿಧ ಸ್ಪರ್ಧೆಗಳು
Udaya Bazar Sports

ಸಮಿತಿಯ ಮಾರ್ಗದರ್ಶಕರಾಗಿ ಡಿ.ಡಿ ಶರ್ಮಾ, ಆಹ್ವಾನಿತ ಸದಸ್ಯರಾಗಿ ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ಪ್ರಾಂಶುಪಾಲೆ ಶಶಿಕಲಾ ಖೂರ್ಸೆ, ಖಾಯಂ ಆಹ್ವಾನಿತ ಸದಸ್ಯರುಗಳಾಗಿ ಮಂಜುನಾಥ ಭಟ್ ಸುವರ್ಣ ಗದ್ದೆ. ಶ್ರೀಪಾದ ಭಟ್ಟ, ಸತ್ಯನಾರಾಯಣ ಶರ್ಮಾ, ಮಹೇಶ ಶೆಟ್ಟಿ. ಗೋಕರ್ಣ, ವಿನಾಯಕ ಕಾಮತ್ ಇದ್ದಾರೆ.

Vinayak Rexin

ಶ್ರೀಗಳವರು‌ ನೂತನ ಸಮಿತಿಗೆ ಆಶೀರ್ವದಿಸಿ, ಸಂಸ್ಥೆಯ ಉದ್ಧೇಶ ಸಾಕಾರ ಹಾಗೂ ಅಭಿವೃದ್ಧಿಯ ದಿಸೆಯಲ್ಲಿ ಸಂಪೂರ್ಣ ತೊಡಗಿಕೊಳ್ಳುವಂತೆ ಮಾರ್ಗದರ್ಶನ ಮಾಡಿದ್ದಾರೆ.