ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ ಮತ್ತು ಬೆಳಗಾವಿಯಲ್ಲಿ ಮುಖ್ಯ ಮಂತ್ರಿ ಯವರಿಗೆ ಮನವಿ ಸಲ್ಲಿಕೆಗೆ ಅನಂತಮೂರ್ತಿ ಹೆಗಡೆ ಮುಂದಾಗಿದ್ದಾರೆ. ಹೋರಾಟ ಮುಂದುವರೆಸಿರುವ ಅವರು ಇದೀಗ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.
ಅನಂತಮೂರ್ತಿ ಹೇಳೋದೇನು?
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದನ್ನ ಕಣ್ಣಾರೆ ಕಂಡರೂ ಸಹ ಸುಮ್ಮನಿದ್ದರೆ ಏನು ಅರ್ಥ?
ಮಂಗಳೂರಿನಲ್ಲಿ ಭಾಗದಲ್ಲಿ 8 ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ ,
ನಮ್ಮ ಶಿರಸಿ ಕುಮಟಾ ಭಾಗದಲ್ಲಿ ಒಂದೂ ಇಲ್ಲ ನಮಗೆ ಯಾಕೆ ಶಾಪ ?
ಕ್ಯಾನ್ಸರ್, ಕಿಡ್ನಿ, ಹೃದಯ ಹೀಗೇ ಹಲವಾರು ಖಾಯಿಲೆಗಳಿಗೆ ದಿನಕ್ಕೆ ನಮ್ಮ ಊರಿನ ಸುಮಾರು 500 ಜನ ದೂರದ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಸ್ಪತ್ರೆಗೆ ಹೋಗುತ್ತಿದ್ದಾರೆ , ಹೋಗುವ ಅನಿವಾರ್ಯತೆ ಇದೆ , ನಮಗೆ ಶಾಪದ ಮುಕ್ತಿ ಯಾವಾಗ?
ಇನ್ನೂ ಯಾಕೆ ಸುಮ್ಮನಿರಬೇಕು?
ನಮ್ಮ ಜಿಲ್ಲೆಯು ಸಮಸ್ಯೆಗಳ ತಾಣ ವಾಗಿದೆ,ಉತ್ತರವೇ ಕಾಣದ ಉತ್ತರ ಕನ್ನಡ ವಾಗಿದೆ, ಇದಕ್ಕೆ ಕಾರಣ ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ, ಅಸಡ್ಡೆ, ಹಾಗೂ ನಮ್ಮಂತಹ ಪ್ರಜೆಗಳ ಆಲಸ್ಯ, ನಮಗೆ ಸ್ವಾಭಿಮಾನ ಇದ್ದರೆ ಈಗಲಾದರೂ ಹೋರಾಡಲೆ ಬೇಕು,
ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಹುಮುಖ್ಯ ತಕ್ಷಣ ಆಗಲೇ ಬೇಕು, ಒಂದು ಕುಮಟಾ ಭಾಗದಲ್ಲಿ, ಇನ್ನೊಂದು ಶಿರಸಿ ಭಾಗದಲ್ಲಿ , ಇದಕ್ಕಾಗಿ ನಾವು ಶಿರಸಿ ಯಿಂದ ಪಾದಯಾತ್ರೆ ಮೂಲಕ ಕಾರವಾರ ತಲುಪಿ ಮನವಿ ನೀಡಿದ್ದೇವೆ, ಸರಕಾರದ ಪ್ರತಿಕ್ರಿಯೆ ಇಲ್ಲ, ಇಷ್ಟೊಂದು ಬೇಜವಾಬ್ದಾರಿ ಸಹಿಸಲು ಸಾಧ್ಯವಿಲ್ಲ, ದಿನಾಂಕ 27.11.2023 ಸೋಮವಾರ ಬೆಳಿಗ್ಗೆ 9 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಿನಿ ವಿಧನಸೌಧಕ್ಕೆ ಬಂದು, ಅಲ್ಲೇ ಕುಳಿತು ಕೊಂಡು, ಪ್ರತಿನಿತ್ಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ನಿರಂತರ ಹೋರಾಟ ಮಾಡಲಾಗುವುದು , ಪ್ರತೀ ಪಂಚಾಯತಿ, ಸಹಕಾರಿ ಸಂಘಗಳು,ಮಹಿಳಾ ಮಂಡಳ, ಸಾಮಾಜಿಕ ಸಂಘಟನೆ ಗಳು ಒಂದೊಂದು ದಿನ ಆಗಮಿಸಿ ಹೋರಾಟ ದಲ್ಲಿ ಭಾಗ ವಹಿಸ ಬೇಕು ಎಂಬುದಾಗಿ ವಿನಂತಿ ಮಾಡಿಕೊಳ್ಳುತ್ತೇನೆ ,
ಸತತ 7 ದಿನ ಹೋರಾಟದ ನಂತರ ದಿನಾಂಕ 04.12.2023 ಸೋಮವಾರ ಬೆಳಗಾವಿಗೆ ಪ್ರಯಾಣ ಮಾಡಿ ವಿಧಾನ ಸೌಧ ದಲ್ಲಿ ಚಳಿಗಾಲದ ಅಧಿವೇಶದಲ್ಲಿ ಧರಣಿ ಸತ್ಯಾಗ್ರಹ ಮಾಡಿ ನೇರವಾಗಿ ಮುಖ್ಯ ಮಂತ್ರಿಯವರಿಗೆ ಮನವಿ ನೀಡಲಾಗುವುದು , ನಮ್ಮ ಹೊರಟ ನಿರಂತರ
27.11.2023 ಸೋಮವಾರ ಬೆಳಿಗ್ಗೆ 9.30 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಹತ್ತಿರ ಎಲ್ಲರೂ ಆಗಮಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ
ಇಂತಿ ಅನಂತ ಮೂರ್ತಿ ಹೆಗಡೆ
ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ರಚಿಸಲಾಗುವುದು,
ಪ್ರತೀ ಪಂಚಾಯತಿ ಮಟ್ಟದಲ್ಲಿ ಕೆಲವರನ್ನ ನಮ್ಮ ಹೋರಾಟ ಸಮಿತಿಯ ಸದಸ್ಯರಾಗಿ ಸೇರಿಸಿ ಕೊಳ್ಳಲಾಗುವುದು , ಪದಾಧಿಕಾರಿಗಳ ರಚನೆ ಮಾಡಲಾಗುವುದು , ಹೋರಾಟದಲ್ಲಿ ಆಸಕ್ತಿ ಇದ್ದವರು ನಮ್ಮನ್ನ ಸಂಪರ್ಕಿಸಿ,
ಈ ಹೋರಾಟ ಅನಿರ್ದಿಷ್ಟ ಅವಧಿಯ ವರೆಗೆ, ಸದ್ಯ ಶಾಂತಿಯುತ ಹೋರಾಟ, ಇದಕ್ಕೆ ಜನಪ್ರತಿನಿಧಿಗಳು ಕಿಮ್ಮತ್ತು ಕೊಡದೇ ಅಸಡ್ಡೆ ಮಾಡಿದರೆ, ನಮ್ಮ ಹೋರಾಟಕ್ಕೆ ಯಾವುದೇ ಪುರಸ್ಕಾರ ನೀಡದೆ ಹೋದರೆ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ, ಮುಂದೆ ಅಮರಣಾಂತ ಉಪವಾಸ,
ಇಷ್ಟು ವರ್ಷದ ಹೋರಾಟದ ಲೆಕ್ಕವೇ ಬೇರೆ , ಇನ್ನು ಮುಂದಿನ ಹೋರಾಟದ ಲೆಕ್ಕವೇ ಬೇರೆ ಸ್ವಾಭಿಮಾನಿ ಹೋರಾಟಗಾರರ ಎಚ್ಚರಿಕೆ ಎಂದು ಪ್ರಕಟಿಸಿದರು.
ಸಂಪರ್ಕಿಸಿ
ಶ್ರೀ ಅನಂತ ಮೂರ್ತಿ ಹೆಗಡೆ
9448317709
ಶ್ರಿ ಉಮೇಶ್ ಹರಿಕಾಂತ್
9481633324
ಶ್ರೀ ಸಂತೋಷ್ ನಾಯ್ಕ್
9449995439
ಶ್ರೀ ಅಹೀಶ್ ಹೆಗಡೆ
9482306468