ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ ನಿವೇದಿತಾ ನಾಗರಾಜ ಭಂಡಾರಿ (36) ಎಂದು ಗುರುತಿಸಲಾಗಿದೆ. ಮಹಿಳೆ ನಿವೇದಿತಾ ಊರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ.

RELATED ARTICLES  ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತೆ ಕಾಂಗ್ರೆಸ್‌ಗೆ!

ಶನಿವಾರ ದ್ವಿಚಕ್ರ ವಾಹನ ದಲ್ಲಿ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಅವರು ಮಕ್ಕಳನ್ನು ನಗರದ ಪಿಕ್ ಅಪ್ ಬಸ್ ನಿಲ್ದಾಣದಲ್ಲಿ ಬಿಟ್ಟು ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೆಡ್ ಬಂದರಿಗೆ ತೆರಳಿ ಬಂಡೆ ಮೇಲಿಂದ   ಸಮುದ್ರಕ್ಕೆ ಹಾರಿದ್ದಾರೆ, ಕೋಸ್ಟಲ್‌ ಗಾರ್ಡ್ ಪೊಲೀಸರು ಈಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಲೆಯ ರಭಸಕ್ಕೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಆಭರಣಗಳು, ಮಾಂಗಲ್ಯ, ಕಾಲುಂಗುರ ಹಾಗೂ ಮೊಬೈಲ್‌ ಅನ್ನು ದ್ವಿಚಕ್ರ ವಾಹನದ ಬಾಕ್ಸಿನಲ್ಲಿ ಇಟ್ಟಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕುಮಟಾ ಪಿ ಎಸ್ ಐ ನವೀನ ನಾಯ್ಕ್ ತಿಳಿಸಿದ್ದಾರೆ

RELATED ARTICLES  ಪಾವನಿ ನಾಯ್ಕ ರಾಜ್ಯಮಟ್ಟಕ್ಕೆ ಆಯ್ಕೆ.