ಕುಮಟಾ : ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಬಾಡದಲ್ಲಿ ನಡೆದ ಪಿ.ಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ.ಭಂಡಾರಕರ್ಸ  ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಭಾಗವಹಿಸಿದ ೨೨ ಸ್ಪರ್ಧೆಗಳಲ್ಲಿ ೧೭ ರಲ್ಲಿ ಪ್ರಶಸ್ತಿ ಗಳಿಸುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ  ಇಂಗ್ಲೀಷ್ ಪ್ರಬಂಧದಲ್ಲಿ ಸ್ವಾತಿ ಗಾಯಿತೊಂಡೆ ಪ್ರಥಮ ಸ್ಥಾನ,  ಇಂಗ್ಲೀಷ್ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಅನನ್ಯ ಭಾಗ್ವತ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ದೀಕ್ಷಿತಾ ರೇವಣಕರ್ ಪ್ರಥಮ ಸ್ಥಾನ, ಭಾವಗೀತೆಯಲ್ಲಿ ಭೂಮಿಕಾ ಭಟ್ಟ ಪ್ರಥಮ ಸ್ಥಾನ, ಜಾನಪದಗೀತೆಯಲ್ಲಿ ಗಿರೀಶ ಶಾನಭಾಗ ಪ್ರಥಮ ಸ್ಥಾನ  ಹಾಗೂ ಭಕ್ತಿಗೀತೆಯಲ್ಲಿ ಶ್ರೀರಾಮ ಹೆಗಡೆ ದ್ವಿತೀಯ ಸ್ಥಾನ, ಆಶುಭಾಷಣದಲ್ಲಿ ಸೃಜನಾ ರಾವ್ ದ್ವಿತೀಯ ಸ್ಥಾನ ಮತ್ತು ಕನ್ನಡ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ನಿಯತಿ ನಾಯಕ ತೃತೀಯ ಸ್ಥಾನ ಪಡೆದಿರುತ್ತಾರೆ.

RELATED ARTICLES  ತಂದೆ ಹಾಗೂ ಮಗ ಒಂದೇ ದಿನ ಸಾವು : ಮುಗಿಲು ಮುಟ್ಟಿದ ಕುಟುಂಬದ ಆಕೃಂದನ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ  ಇಂಗ್ಲೀಷ್ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ  ನಿಹಾರಿಕಾ ರಾವ್ ಪ್ರಥಮ ಸ್ಥಾನ, ಕನ್ನಡ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಅನಿಶಾ ನಾಯ್ಕ ಪ್ರಥಮ ಸ್ಥಾನ, ಇಂಗ್ಲೀಷ್ ಪ್ರಬಂಧದಲ್ಲಿ ಶೃಂಗ ಹೆಗಡೆ ಪ್ರಥಮ ಸ್ಥಾನ , ಚಿತ್ರಕಲೆ ಸ್ಪರ್ಧೆಯಲ್ಲಿ ಕು. ಸೋನಾಲಿ ಶೇಟ್ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಏಕಪಾತ್ರಾಭಿನಯದಲ್ಲಿ ಶಿವಾನಿ ನಾಯ್ಕ ದ್ವಿತೀಯ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ ಅದ್ವೈತ ಕಡ್ಲೆ, ಮತ್ತು ರಾಘವೇಂದ್ರ ನಾಯ್ಕ ದ್ವಿತೀಯ ಸ್ಥಾನ,  ಭಕ್ತಿಗೀತೆಯಲ್ಲಿ ಶಶಾಂಕ ಭೋಮಕರ್ ದ್ವಿತೀಯ ಸ್ಥಾನ, ಮತ್ತು ಭಾವಗೀತೆಯಲ್ಲಿ ಅಕ್ಷತಾ ಶಾನಭಾಗ ತೃತೀಯ ಸ್ಥಾನ, ಜಾನಪದಗೀತೆಯಲ್ಲಿ ಗ್ರೀಷ್ಮ ಗಾವಾಡಿ ತೃತೀಯ ಸ್ಥಾನ, ಪಡೆದಿರುತ್ತಾರೆ.

RELATED ARTICLES  ಈಜಲು ಹೋದ ಬಾಲಕ ನೀರುಪಾಲು : ಬಾಲಕನಿಗಾಗಿ ಶೋಧ ಕಾರ್ಯ.

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಕಿರಣ ಭಟ್ಟ, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಶ್ರೀ ಗುರುರಾಜ ಶೆಟ್ಟಿ ಹಾಗೂ ಬೋಧಕ, ಬೋಧಕೆತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ ಮುಂದಿನ ಹಂತ ಜಿಲ್ಲಾ ಮಟ್ಟಕ್ಕೆ ಶುಭವನ್ನು ಕೋರಿದ್ದಾರೆ.