ಭಟ್ಕಳ: ತಾಲೂಕಿನ ವೆಂಕಟಾಪುರದ ನೀರಕಂಠ ರಸ್ತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಬೈಕ್ ಹಾಗೂ ಲಾರಿಗಳ ನಡುವಿನ ಡಿಕ್ಕಿಯಲ್ಲಿ ಯುವತಿಯೋರ್ವಳು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಳನ್ನು ಸಾಗರ ತಾಲೂಕಿನ ಕಾರ್ಗಲ್ ನಿವಾಸಿ ಲಿಕಿತಾ ಮಾಬ್ಲೇಶ್ವರ ಗೊಂಡ (23) ಎಂದು ಗುರುತಿಸಲಾಗಿದ್ದು,
ಭಟ್ಕಳ ಕಡೆಯಿಂದ ಶಿರಾಲಿಯ ಕಡೆಗೆ ಹೋಗುತ್ತಿದ್ದ ಬೈಕ್ ಚಾಲನೆ ಮಾಡುತ್ತಿದ್ದ ಗಣೇಶ ಗೊಂಡ (35) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೋರ್ವ ಮಹಿಳೆ ಗಿರಿಜಾ ಗೊಂಡ (35) ಎನ್ನುವವರಿಗೆ ತೀವ್ರವಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.

RELATED ARTICLES  ಭೀಕರ ಅಪಘಾತ : ಸವಾರ ಸಾವು.
Vinayak Rexin

ಗಣೇಶ ಗೊಂಡ ಹಾಗೂ ಆತನ ಸಹೋದರಿ ಹೋಗುತ್ತಿರುವಾಗ ಅಪರಿಚಿತ ಲಾರಿಯೊಂದು ಬೈಕ್ ಡಿಕ್ಕಿ ಹೊಡೆದಿದೆ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಲಿಕಿತಾ ರಸ್ತೆಯ ಮೇಲೆ ಬಿದ್ದಿದ್ದಾರೆ ಈ ವೇಳೆ ಲಾರಿ ಚಕ್ರಗಳು ಆಕೆಯ ತಲೆ ಮೇಲೆ ಹಾಯ್ದು ಪರಿಣಾಮ ಲಿಖಿತಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆನ್ನಲಾಗಿದೆ. ಬೈಕ್ ಸವಾರ ಗಣೇಶ ಗೊಂಡ ಈತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಶಿರಾಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

RELATED ARTICLES  ಮುರ್ಡೇಶ್ವರದಲ್ಲಿ ಭಾರೀ ಬೆಂಕಿ ಅವಘಡ.
Udaya Bazar Sports
Disha 2