ಕುಮಟಾ : ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿ ಸವಾರನೋರ್ವ ಎದುರಿಗೆ ಬಂದ ನಾಯಿಗಳನ್ನ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿಯಾಗಿ ಬಿದ್ದಿದ್ದು, ಸ್ಕೂಟಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಅಪಘಾಯದಲ್ಲಿ ಕೋಳಿ ಮಂಜಗುಣಿ ನಿವಾಸಿ, ಬೈಕ್ ಸವಾರ ಹರೀಶ ರಾಮ ಪಡ್ತಿ( 26), ಹಿಂಬದಿ ಸವಾರ ಮೋಹನ್ ಕಂತ್ರಿ ಪಡ್ತಿ(55) ಗಾಯಗೊಂಡಿದ್ದಾರೆ. ಇವರು ಕುಮಟಾದಿಂದ ಕೋಳಿ ಮಂಜಗುಣಿಯಲ್ಲಿರುವ ಮನೆಗೆ ಹೋಗುತ್ತಿದ್ದು, ಈ ವೇಳೆ ಬರ್ಗಿ ಬಸ್ ತಂಗುದಾಣದ ಸಮೀಪ ಎದುರಿಗೆ ನಾಯಿ ಬಂದಿದ್ದು, ಅದನ್ನ ತಪ್ಪಿಸಲು ಹೋಗಿ ಸ್ಕೂಟಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಇದರಿಂದಾಗಿ ಸ್ಕೂಟಿ ಹಿಂಬದಿ ಸವಾರ ಮೋಹನ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುಗ ಮೋಹನ ಅವರನ್ನ ಕುಮಟಾ ಸರಕಾರಿ ಆಸ್ಪತ್ರೆಗೆ ತರಲಾಗಿದ್ದು ಚಿಕಿತ್ಸೆ ನಡೆದಿದೆ.

ಅಪಘಾತವಾದ ತಕ್ಷಣ ಸ್ಥಳೀಯರು ಪೋನ್ ಮಾಡಿ ಕರೆ ಮಾಡಿ ಅರ್ಧ ಗಂಟೆಯಾದರೂ ಸಹ 108ವಾಹನ ಸ್ಥಳಕ್ಕೆ ಆಗಮಿಸಲು ವಿಳಂಬವಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಮೋಹನ್ ಅವರು ರಸ್ತೆಯ ಪಕ್ಕದಲ್ಲಿಯೇ ಇರುವ ಸ್ಥಿತಿ ಉಂಟಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
