ಶಿರಸಿ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣ ವಿಚಾರವಾಗಿ ಈಗ ನಾವು ಮಾಡುತ್ತಿರುವುದು ಶಾಂತಿಯುತ ಹೋರಾಟ, ಈ ಹೋರಾಟಕ್ಕೆ ರಾಜಕಾರಣಿಗಳು, ಸರ್ಕಾರದವರು ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಂಡು ಅಸಡ್ಡೆ ಮಾಡಿದರೇ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು, ನಮ್ಮ ಹೋರಾಟ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಆಗುವವರೆಗೂ ನಿರಂತರವಾಗಿರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇಂದು ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಅವರ ನೇತೃತ್ವದಲ್ಲಿ ಶಿರಸಿಯ ತಹಶೀಲ್ದಾರ್ ಕಚೇರಿಯಲ್ಲಿ 7 ದಿನಗಳ ಕಾಲ ಹಮ್ಮಿಕೊಂಡ ಧರಣಿ ಸತ್ಯಾಗ್ರಹದ ರ್ಯಾಲಿಗೆ ಶ್ರೀ ಮಾರಿಕಾಂಬಾ ದೇವಾಲಯದಿಂದ ಚಾಲನೆ ನೀಡಿ ಮಾತನಾಡಿದರು.
ರಸ್ತೆಯಲ್ಲಿ ಅಪಘಾತ ಆದ ನಂತರ ತೀವ್ರ ರಕ್ತಸ್ರಾವವಾಗಿ ಅನೇಕ‌ ಜನ ಸಾವನ್ನಪ್ಪಿದ್ದವರನ್ನು ಕಾಣುತ್ತಿದ್ದೇವೆ ವಾರಕ್ಕೆ ಕನಿಷ್ಟ ಪಕ್ಷ 4 ರಿಂದ 5 ಜನ ತುರ್ತು ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ. ತಕ್ಷಣ ತುರ್ತು ಚಿಕಿತ್ಸೆ ಬೇಕೆಂದರೆ 3 ಘಂಟೆ ಪ್ರಯಾಣ ಮಾಡಬೇಕು, ಇದು ನೋವಿನ‌ ವಿಚಾರ. ನಾವು ಜೀವನದಲ್ಲಿ ಯಾವುದೇ ಸಣ್ಣಪುಟ್ಟ ಘಟನೆಗಳಿಗೂ ಬಹಳ ರೀಯ್ಯಾಕ್ಟ್ ಮಾಡುತ್ತೇವೆ. ಯಾವುದೇ ಒಂದು ಮನರಂಜನೆ ಕಾರ್ಯಕ್ರಮ ಎಂದರೆ ಜಾಸ್ತಿ‌ ಜನ ಹೋಗುತ್ತೇವೆ. ಮನುಷ್ಯನಿಗೆ ಜೀವನದಲ್ಲಿ ಎಲ್ಲವೂ ಬೇಕೆ ಬೇಕು ಆದರೆ, ಬೇರೆ ಎಲ್ಲಾ ವಿಷಯಗಳಿಗೆ ಹೇಗೆ ಮಹತ್ವ ನೀಡುತ್ತೇವೋ ಹಾಗೇಯೇ ನಮ್ಮ ಊರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಅವೆಂದರೆ ಆಸ್ಪತ್ರೆ, ಮೆಡಿಕಲ್ ಕಾಲೇಜು. ನಮ್ಮೂರಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದರೆ ಯಾವುದೇ ಉದ್ಯಮಗಳು ಬರುವುದಿಲ್ಲ. ಯಾವ ಪ್ಯಾಕ್ಟರಿ ಕೂಡ ನಮ್ಮೂರಿಗೆ ಬರುವುದಿಲ್ಲ‌. ಯಾವ ರೀತಿಯಲ್ಲೂ ಅಭಿವೃದ್ಧಿ ಕೂಡ ಆಗೋದಿಲ್ಲ. ಉದ್ಯಮ, ಪ್ಯಾಕ್ಟರಿ ಬರೋದಿಲ್ವೋ ಆಂತಹ ಊರು ಅಭಿವೃದ್ಧಿ ಆಗೋದಿಲ್ಲ.

RELATED ARTICLES  Модульные Детские Сады И Школы Лстк
Udaya Bazar Sports

ನಾವು ಮುಂದಿನ 7 ದಿನಗಳ ಕಾಲ ತಹಶೀಲ್ದಾರ್ ಕಛೇರಿ ಎದುರು ದಿನನಿತ್ಯ ಹೋರಾಟ ಮಾಡಿ, ನಂತರ ನಮ್ಮ ಮುಂದಿನ ಹೋರಾಟ ಬೆಳಗಾವಿಯ ಸುವರ್ಣಸೌಧದಲ್ಲಿ. ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧೀವೇಶನ ನಡೆಯುವ ಸುವರ್ಣ ಸೌಧಕ್ಕೆ ಹೋಗಿ ಉಗ್ರವಾದ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜನರಲ್ಲಿ ಮನವರಿಕೆ ಮಾಡಿ ಸಂಘಟನೆ ಮಾಡುತ್ತೇವೆ. ಎಲ್ಲಾ ಗಣ್ಯರು ಕೂಡ ಸತ್ಯಾಗ್ರಹ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದಿದ್ದಾರೆ. ನಾವು ಜನರಲ್ಲಿ ಆಶಾಭಾವನೆ ಮೂಡಿಸುತ್ತಿದ್ದೇವೆ. ಈಗ ನಾವು ಮಾಡುತ್ತಿರುವುದು ಶಾಂತಿಯುತ ಹೋರಾಟ, ಈ ಹೋರಾಟಕ್ಕೆ ರಾಜಕಾರಣಿಗಳು, ಸರ್ಕಾರದವರು ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಂಡು ಅಸಡ್ಡೆ ಮಾಡಿದರೇ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು, ನಮ್ಮ ಹೋರಾಟ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಆಗುವವರೆಗೂ ನಿರಂತರವಾಗಿರುತ್ತದೆ. ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅಗ್ರಹಿಸಿದರು.

ನಂತರ ಮಾತನಾಡಿದ ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ನಾವು ಆಯ್ಕೆ ಮಾಡುವ ರಾಜಕಾರಣಿಗಳು ಎಲ್ಲರೂ ಕೂಡ ಹಣ ಮಾಡುವವರು. ಕೋಟಿಗಟ್ಟಲೆ ಹಣ ಮಾಡುತ್ತಾರೆ ವಿನಹಃ ಒಂದು ಆಸ್ಪತ್ರೆ ಮಾಡಲ್ಲ. ನೀವು ಬಡವರಿಗೆ ಆಸ್ಪತ್ರೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಅನಂತಮೂರ್ತಿ ಹೆಗಡೆಯವರಿಗೆ ನಮ್ಮ ಸಂಘದಿಂದ ಬೆಂಬಲ ನೀಡುತ್ತೇವೆ. ಬಡವರಿಗೆ ಅನುಕೂಲ ಮಾಡಿಕೊಡದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ರಕ್ತವನ್ನು ಚೆಲ್ಲುತ್ತೇವೆ ವಿನಹಃ ಆಸ್ಪತ್ರೆ ಹೋರಟ ಬಿಡುವುದಿಲ್ಲ ಇದು ನನ್ನ ಎಚ್ಚರಿಕೆ ಎಂದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.
Vinayak Rexin

ನಂತರ‌ ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ ಮಾತನಾಡಿ, ನಾವು ಒಂದನೇ ಹಂತದಲ್ಲಿ ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದು ಎರಡನೇ ಹಂತದ ಹೋರಾಟ, ಮೂರನೇ ಹೋರಾಟ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧೀವೇಶನದ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಆಸ್ಪತ್ರೆಗೆ ನಿರ್ಮಾಣಕ್ಕೆ ಸ್ಥಳ ಇಲ್ಲವಾದರೇ ನಾವೇ ನಿಮಗೆ ಸ್ಥಳದ ಬಗ್ಗೆ ಮಾಹಿತಿ ನೀಡುತ್ತೇವೆ ಶಿರಸಿ ದೋಡ್ನಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ಪತ್ರೆಗೆ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗ ಸರ್ಕಾರದ್ದೇ ಇದೆ ಎಂದು ಹೇಳಿದರು.

ನಂತರ ಮಾರಿಕಾಂಬಾ ದೇವಾಲಯದಿಂದ ನೂರಾರು ಆಟೋ ಚಾಲಕರು ಹಾಗೂ ಆಟೋಗಳೊಂದಿಗೆ ಸಾಗಿದ ರ್ಯಾಲಿ ಶಿರಸಿಯ ವಿವಿಧ ರಸ್ತೆಗಳ ಮೂಲಕ ಸಾಗಿ ನಗರದ ತಹಶೀಲ್ದಾರ್ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಲುಪಿ, ಸತ್ಯಾಗ್ರಹ ಮುಂದುವರೆಯಿತು. ಮುಂದಿನ 7 ದಿನಗಳ ಕಾಲ ಪ್ರತಿನಿತ್ಯ ಮಧ್ಯಾಹ್ನ 1 ಘಂಟೆಯವರೆಗೆ ಧರಣಿ ಸತ್ಯಾಗ್ರಹ ಮಾಡಲಿದ್ದು, ಪ್ರತಿನಿತ್ಯ ಜಿಲ್ಲೆಯ ಅನೇಕ ಗಣ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಪಂಚಾಯತಿ, ಸಹಕಾರಿ ಸಂಘಗಳು,ಮಹಿಳಾ ಮಂಡಳ, ಸಾಮಾಜಿಕ ಸಂಘಟನೆಗಳು ಒಂದೊಂದು ದಿನ ಆಗಮಿಸಿ ಹೋರಾಟದಲ್ಲಿ ಭಾಗವಹಿಸಲಿವೆ.

Disha 2

ಸತತ 7 ದಿನ ಹೋರಾಟದ ನಂತರ ದಿನಾಂಕ 04.12.2023 ಸೋಮವಾರದಂದು ಬೆಳಗಾವಿಗೆ ಪ್ರಯಾಣ ಮಾಡಿ ಸುವರ್ಣಸೌಧ ದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ಧರಣಿ ಸತ್ಯಾಗ್ರಹ ಮಾಡಿ ನೇರವಾಗಿ ಮುಖ್ಯಮಂತ್ರಿಯವರಿಗೆ ಮನವಿ ನೀಡಲಿದ್ದಾರೆ.

Taranga Electronic