ಶಿರಸಿ:- ಇಲ್ಲಿನ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗ್ರಹಿಸಿ ಶಿರಸಿ ತಹಶೀಲ್ದಾರ್ ಕಛೇರಿ ಎದರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸತ್ಯಾಗ್ರಹ ಸ್ಥಳಕ್ಕೆ ಗಣ್ಯರು ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

ನಗರದ ತಹಶೀಲ್ದಾರ್ ಕಚೇರಿ‌ ಎದುರು
ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹನ್ಮಿಕೊ‌ಂಡ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಿಗ್ಗೆ 10 ಘಂಟೆಗೆ ಅನಂತಮೂರ್ತಿ ಅವರ ಬೆಂಬಲಿಗರೊಂದಿಗೆ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಧರಣಿ ಸತ್ಯಾಗ್ರಹದಲ್ಲಿ ನಿರತರಾದರು.

RELATED ARTICLES  ಕರ್ನಾಟಕ ಪ್ರೆಸ್ ಕ್ಲಬ್ ಭಟ್ಕಳ ತಾಲೂಕ ಘಟಕದಿಂದ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ್ ಲಕ್ಷ್ಮಿಶ ಅವರಿಗೆ ಸನ್ಮಾನ.

ನಂತರ ಅಲ್ಲಿ ಆಗಮಿಸಿದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ನಮಗೆ ಆಸ್ಪತ್ರೆ ನೀಡಿ ಜೀವ ಊಳಿಸಿ, ಇದು ಉತ್ತರ ಕನ್ನಡ ಜಿಲ್ಲೆಯ ಸ್ವಾಭಿಮಾನದ ಹೋರಾಟ, ಇಂದು ಎರಡನೇ ದಿನ‌, ನಿನ್ನೆ ಬೆಳಿಗ್ಗೆ ಪ್ರಾರಂಭವಾದ ನಮ್ಮ‌ ಧರಣಿ ಸತ್ಯಾಗ್ರಹ ಮುನ್ನೆಡೆಯುತ್ತಿದೆ. ಘಟ್ಟದ ಮೇಲೊಂದು ಘಟ್ಟದ ಕೆಳಗೆ ಒಂದು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು ಎನ್ನುವುದು ನಮ್ಮ‌ಕೂಗು. ನಮ್ಮದು ಈಗ ಶಾಂತಿಯುತ ಹೋರಾಟ, ಸರ್ಕಾರ ಆದಷ್ಟೂ ಬೇಗ ನಮಗೆ ಆಸ್ಪತ್ರೆ ನೀಡಲೇಬೇಕು, ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಪ್ರತಿಯೊಬ್ಬರು ಕೂಡ ಈ ಹೋರಾಟದಲ್ಲಿ ಭಾಗವಹಿಸಿ, ಹೆಚ್ಚು ಹೆಚ್ಚು ಜನ ಭಾಗವಹಿಸಿದ ಹಾಗೆ ನಮಗೆ ಶಕ್ತಿ ಬರುತ್ತದೆ ಎಂದರು.

RELATED ARTICLES  ದೇಶಪಾಂಡೆ ಬಗ್ಗೆ ಅನಂದ ಅಸ್ನೋಟಿಕರ್ ಹೇಳಿಕೆ: ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು.

ಸತ್ಯಾಗ್ರಹ ಸ್ಥಳಕ್ಕೆ ನೂರಾರು ಜನರು ಆಗಮಿಸಿ ಬೆಂಬಲ ಸೂಚಿಸಿದ್ದಲ್ಲದೇ, ಹೋರಾಟಕ್ಕೆ ಒಂದು ಹೋರಾಟ ಸಮಿತಿ ರಚಿಸಲು ಬೆಂಬಲಿಸಿದರು. ಹಾಗೂ ಡಿಸೆಂಬರ್ 4ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಿವ ಕರ್ನಾಟಕ ವಿಧಾನಸಭಾ ಅಧೀವೇಶನ ಸಂದರ್ಭದಲ್ಲಿ ಸುವರ್ಣಸೌಧಕ್ಕೆ ಬರುವುದಾಗಿ ಹಾಗೂ ತಮ್ಮ ನೆರೆಯವರಿಗೂ ತಿಳಸಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ, ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಮಾಜಿಕ ಕಾರ್ಯಕರ್ತ ಕೇಮು ವಂದಿಗೆ ಸೇರಿದಂತೆ ಇನ್ನಿತರರು ಧರಣಿಯಲ್ಲಿ ಭಾಗವಹಿಸಿ ಸರ್ಕಾರವನ್ನು ಒತ್ತಾಯಿಸಿದರು.