ಸುಳ್ಯ : ತಾಲೂಕಿನಲ್ಲಿ ಭಾರತೀಯ ಗೋ ಪರಿವಾರ ರಚನೆ ಮಾಡಿ ಅಭಯಾಕ್ಷರ ತೊಡಗಿಸುವ ಬಗ್ಗೆ ಸುಳ್ಯದ ಶ್ರೀ ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ಅಕ್ಟೋಬರ್ 12 ರಂದು ಸಭೆ ನಡೆಸಲಾಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ರಾದ ಎಸ್ ಅಂಗಾರರವರ ಅಧ್ಯಕ್ಷತೆಯಲ್ಲಿ , ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಸಭೆಯು ನಡೆಯಿತು.

ಆಂದೋಲನ ವಿಭಾಗ ಕಾರ್ಯದರ್ಶಿ ಹಾಗೂ ಉಪ್ಪಿನಂಗಡಿ ಮಂಡಲಾಧ್ಯಕ್ಷರಾದ ಆಶೋಕ್ ಕೆದ್ಲರವರು ಗೋಸಂರಕ್ಷಣೆಗಾಗಿ ತಮ್ಮ ಜೀವಿತಾವಧಿಯನ್ನು ಮುಡಿಪಾಗಿಟ್ಟ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇಡೀ ರಾಜ್ಯದಲ್ಲಿ ಗೋಭಕ್ತರ ಸಂಘಟನೆಗಾಗಿ ಗೋಪರಿವಾರವನ್ನು ಆರಂಭಿಸಿದ್ದಾರೆ ಎಂದು ಪ್ರಾಸ್ತಾವಿಕ ಮಾತನ್ನಾಡಿದರು.

ಭಾರತೀಯ ಗೋ ಪರಿವಾರ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ! ವೈ.ಬಿ ಕೃಷ್ಣ ಮೂರ್ತಿ ಯವರು ಗೋಸಂರಕ್ಷಣೆಯ ಸಪ್ತ ಸೂತ್ರಗಳ ಬಗ್ಗೆ ಹೇಳಿದರು ಹಾಗೂ ಗೋಪರಿವಾರದ ಸದಸ್ಯರು ಮನೆಮನೆಗೆ ಭೇಟಿ ನೀಡಿ ಗೋಸಂರಕ್ಷಣೆಯ ಮಹತ್ವವನ್ನು ತಿಳಿಸಿ ಪ್ರತಿಯೊಬ್ಬ ಗೋಭಕ್ತನೂ ವೈಯುಕ್ತಿಕ ನೆಲೆಯಲ್ಲಿ ಗೋಸಂರಕ್ಷಣೆಯ ಹಕ್ಕೊತ್ತಾಯ ವನ್ನು ಪತ್ರ ಮುಖೇನ ಸಹಿ ಹಾಕಿ ಕೊಡುವಂತೆ ಮನವರಿಕೆ ಮಾಡುವ ದೊಡ್ಡ ಆಂದೋಲನದಲ್ಲಿ ತೋಡಗಿಸ ಬೇಕು ಎಂದು ಹೇಳಿದರು.

RELATED ARTICLES  ಸಿದ್ದಾಪುರದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ?

ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಜಿಯವರು ಗೋಸಂರಕ್ಷಣೆಯ ಬಗ್ಗೆ ಹಿತನುಡಿಗಳನ್ನಾಡಿ ಆಶೀರ್ವಚನ ಮಾಡಿದರು ಹಾಗೂ ಹಕ್ಕೊತ್ತಾಯ ಪತ್ರಕ್ಕೆ ಸಹಿ ಹಾಕುವ ಮುಖೇನ ಅಭಯಾಕ್ಷರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷರಾದ ದೇರಣ್ಣ ಗೌಡ , ತಾಲೂಕು ಪಂಚಾಯತ್ ಅಧ್ಯಕ್ಷೆಯಾದ ಪುಷ್ಪಾವತಿ ಬಾಳಿಲ, ಮಾಜಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ಹಾಗೂ ವರ್ತಕ ಸಂಘದ ಅಧ್ಯಕ್ಷರಾದ ಪಿಬಿ ಸುಧಾಕರ ರೈ ರವರು ಅಭಯಾಕ್ಷರ ಪತ್ರಕ್ಕೆ ಸಹಿ ಹಾಕಿದರು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 10-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಶಾಸಕರಾದ ಎಸ್ ಅಂಗಾರರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಸುಳ್ಯ ತಾಲೂಕಿನಲ್ಲಿ ಅಭಯಾಕ್ಷರವು ಉತ್ತಮ ರೀತಿಯಲ್ಲಿ ನಡೆಯಬೇಕು ಹಾಗೂ ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ವನ್ನು ನೀಡುತ್ತೇವೆ ಎಂದು ಹೇಳಿದರು.

ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಪ್ರೊ. ಶ್ರೀಕೃಷ್ಣ ಭಟ್, ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್, ಶ್ರೀ ಮಠದ ಗೋ ಶಾಲೆ ವಿಭಾಗ ಪ್ರಧಾನರಾದ ಶ್ರೀಕೃಷ್ಣ ಭಟ್ ಮೀನ ಗದ್ದೆ, ಸುಳ್ಯ ವಲಯ ಅಧ್ಯಕ್ಷರಾದ ಡಿಐ ಸುಬ್ರಹ್ಮಣ್ಯ ಭಟ್ ಹಾಗೂ ಸುಳ್ಯ, ಚೊಕ್ಕಾಡಿ, ಗುತ್ತಿಗಾರು , ಬೆಳ್ಳಾರೆ ಹವ್ಯಕ ವಲಯಗಳ ಪದಾಧಿಕಾರಿಗಳು ,ಗುರಿಕ್ಕಾರರು, ಕಾರ್ಯಕರ್ತರು ಮತ್ತು ಎಲ್ಲಾ ಸಮುದಾಯದ ಅಧ್ಯಕ್ಷರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.

ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಯವರು ಧನ್ಯವಾದ ಅರ್ಪಿಸಿದರು. ವಿಜಯಕೃಷ್ಣ ಪೆರಾಜೆಯವರು ಕಾರ್ಯಕ್ರಮ ನಿರೂಪಿಸಿದರು.