ಕುಮಟಾ : ಕಳೆದ  ನಾಲ್ಕು ದಿನಗಳ ಹಿಂದೆ ಕುಮಟಾದ ಪಿಕ್ಅಪ್ ಬಸ್ ಸ್ಟಾಂಡ್ ಬಳಿ  ತನ್ನ ಬೈಕ್ ನಿಲ್ಲಿಸಿ ಮಕ್ಕಳನ್ನು ಇಳಿಸಿ, ತನ್ನ ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ, ಬೈಕ್ ನಲ್ಲಿ ತೆರಳಿ ವನ್ನಳ್ಳಿಯ ಹೆಡ್ ಬಂದರ್ ಬಳಿ ತನ್ನ ಗಾಡಿಯಲ್ಲಿ ಮೊಬೈಲ್ ಹಾಗೂ ಬಂಗಾರವನ್ನು ಇಟ್ಟು , ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾದ ಮಹಿಳೆಯ ಪ್ರಕರಣ ಇದೀಗ ಬೇರೆ ಸ್ವರೂಪ ಪಡೆದಿದೆ. 

RELATED ARTICLES  ವಿಧಾತ್ರಿ ಅಕಾಡೆಮಿ ವಿದ್ಯಾರ್ಥಿಗಳ ಬೆನ್ನೆಲುಬಾಗಿದೆ : ಸಂದೀಪ ಭಟ್ಟ

ಅಧಿಕಾರಿಗಳಿಗೆ ಹಾಗೂ ಕುಟುಂಬಸ್ತರಿಗೆ ತಲೆ ನೋವು ತಂದಿಟ್ಟಿದ್ದ ಕುಮಟಾದ ಸಂತೆಗುಳಿಯ ತಾರಗೋಡು ನಿವಾಸಿ ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ನಾಟಕವಾಡಿ, ಎಲ್ಲರಿಗೂ ಅನುಮಾನ ಬರುವಂತೆ ಮಾಡಿ, ನಾಲ್ಕು ದಿನಗಳಿಂದ  ತಲೆ  ಮರೆಸಿಕೊಂಡಿರುವುದು ಮಂಗಳವಾರ ಬಟಾಬಯಲಾಗಿದೆ.

ಗುಪ್ತವಾದ ಸ್ಥಳದಲ್ಲಿ ಈಕೆಯನ್ನು ಪತ್ತೆ ಹಚ್ಚಿ  ಬಂಧಿಸುವ ಮೂಲಕ ಪ್ರಕರಣ ಭೇದಿಸುವಲ್ಲಿ ಪೊಲೀಸ್ ಅಧಿಕಾರಿಗಳಾದ ಸಿ. ಪಿ.ಐ. ತಿಮ್ಮಪ್ಪ ನಾಯ್ಕ, ಪಿ.ಎಸ್.ಐ ನವೀನ ನಾಯ್ಕ , ಪಿ. ಎಸ್ ಐ ಇ. ಸಿ ಸಂಪತ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ  ಯಶಸ್ವಿಯಾಗಿದ್ದು. ಈಕೆಯು ಎಲ್ಲಿದ್ದಳು? ಯಾವ ಕಾರಣಕ್ಕಾಗಿ ತಲೆಮರಿಸಿಕೊಂಡಿದ್ದಳು ಎಂಬೆಲ್ಲಾ ವಿಷಯಗಳು ಪೊಲೀಸರ ಹೇಳಿಕೆ ನಂತರದಲ್ಲಿ ತಿಳಿದು ಬರಬೇಕಿದೆ.

RELATED ARTICLES  ಕುಮಟಾ ರೋಟರಿ ಪದಗ್ರಹಣ ಸಮಾರಂಭ.