ಕುಮಟಾ : ಶಾಸಕ ದಿನಕರ ಶೆಟ್ಟಿ ಅವರು ಶನಿವಾರ ಕುಮಟಾದ ತಾಲೂಕಾಸ್ಪತ್ರೆಗೆ ಭೇಟಿನೀಡಿ, ವೈದ್ಯಾಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ಆಸ್ಪತ್ರೆಯ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದರು.

ಆಸ್ಪತ್ರೆಯ ಪ್ರಯೋಗಾಲಯ, ಐ. ಸಿ. ಯು. ಘಟಕ ಹಾಗೂ ಇತರ ವಿಭಾಗಗಳಿಗೆ ಭೇಟಿನೀಡಿ,  ರೋಗಿಗಳೊಂದಿಗೆ ಹಾಗೂ ರೋಗಿಗಳ ಸಂಬಂಧಿಕರೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ವಿಚಾರಿಸಿದರು.