ಕುಮಟಾ : ವಿದ್ಯಾರ್ಥಿಗಳು ಕೇವಲ ಪಠ್ಯದ ಶಿಕ್ಷಣಕ್ಕೆ ಮಾತ್ರವೇ ಸೀಮಿತವಾಗದೇ, ವ್ಯಕ್ತಿತ್ವದ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಧನೆ ಪಡೆಯಲು ಗುರುವಿನ ಬಲ, ಗುರಿ ಸಾಧನೆಯ ಛಲ ಇರಬೇಕು. ಹೀಗಾಗಿ ಗುರಿ ಸಾಧನೆಗೆ ಪಠ್ಯದ ಜೊತೆ ಕಲೆ ಹಾಗೂ ಇನ್ನಿತರ ಚಟುಚಟಿಕೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಕಾಶ ನಾಯ್ಕ ಹೇಳಿದರು.

ಪಟ್ಟಣದ ಡಾ. ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ೨೦೨೩-೨೪ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆ ಕಲಾಕಾರನಿಗೆ ಹೆಸರನ್ನು ತಂದು ಕೊಡುತ್ತದೆ. ಶಿಕ್ಷಣದ ಜೊತೆಗೆ ಕಲೆಗೆ ಆದ್ಯತೆ ನೀಡುವವನು ಯಶಸ್ಸುಗಳಿಸಲು ಸಾಧ್ಯ. ಸತತ ಹಾಗೂ ಕಟ್ಟುನಿಟ್ಟಾದ ಅಭ್ಯಾಸದಿಂದ ಸಾಧನೆಯ ದಿಕ್ಕನ್ನು ಕಂಡುಕೊಳ್ಳಬಹುದು. ಆಧುನಿಕ ಜೀವನ ಶೈಲಿಯಿಂದ ಕೊಂಚ ದೂರ ಉಳಿದು ಆರೋಗ್ಯದ ಕಡೆ ಗಮನ ಹರಿಸಬೇಕು. ಜೀವನದಲ್ಲಿ ಕನಿಷ್ಟ ೫ ಜನರಿಗೆ ಮನಸ್ಸು ಸಮಾಧಾನ ಪಡುವಂತೆ ಸಹಾಯ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಕೆಟ್ಟದ್ದನ್ನು ಎಂದೂ ಬಯಸಕೂಡದು ಎಂದು ಡಾ. ಪ್ರಕಾಶ ನಾಯ್ಕ ಕಿವಿ ಮಾತು ಹೇಳಿದರು.

RELATED ARTICLES  ಜನಮನ ಗೆದ್ದ ಚುಟುಕು ಸಾಹಿತ್ಯ ಸಮ್ಮೇಳನ : ಸಂಘಟಕರ ಕಾರ್ಯಕ್ಕೆ ಜನಮೆಚ್ಚುಗೆ.

ಹಳದಿಪುರ ಆರೋಗ್ಯ ಕೇಂದ್ರದ ವೈದ್ಯೆ ಡಾ. ವೈಶಾಲಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ನಿಸರ್ಗದ ನಿಯಮದಂತೆ ಜನ್ಮಕ್ಕೆ ಬಂದಿರುವ ನಾವೆಲ್ಲರು ಮೊದಲು ನಮ್ಮನ್ನು ಪ್ರೀತಿಸಬೇಕು. ಅಸೂಯೆ ಪ್ರವೃತ್ತಿಯಿಂದ ದೂರ ಉಳಿಯಬೇಕು. ನಕಾರಾತ್ಮಕ ಭಾವನೆಗಳಿಂದ ದೂರ ಉಳಿದು ಸಕಾರಾತ್ಮಕ ವಿಚಾರಗಳನ್ನು ಜೀವನದ ಉನ್ನತಿಗೆ ಅಳವಡಿಸಿಕೊಳ್ಳಬೇಕು. ಸ್ವೀಕಾರ ಗುಣಗಳನ್ನು ಅಳವಡಿಸಿಕೊಂಡು ಸಾರ್ಥಕ ಬಹುಕಿನೆಡೆ ಸಾಗಬೇಕು ಎನ್ನುತ್ತಾ, ಕಾಲೇಜು ಜೀವನದ ಹಂತದಲ್ಲಿ ಜೀವನ ರೂಪಿಸುವ ಶಿಕ್ಷಣದ ಜೊತೆ ಇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಕೆನರಾ ಕಾಲೇಜು ಸೊಸೈಟಿ ಉಪಾಧ್ಯಕ್ಷ ಬಿ. ಎಂ ಕಾಮತ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಗುರಿ ಸಾಧನೆಗೆ ದಿಟ್ಟತನ ಸಂಯಮ ಮತ್ತು ತಾಳ್ಮೆ ಅಗತ್ಯ ಎಂದರು. ಚಿರತೆಯ ಬೇಟೆಯ ವೈಖರಿ ವಿವರಿಸಿದ ಅವರು ಸಂಯಮದ ಹಾಗೂ ತಾಳ್ಮೆಯ ಹೆಜ್ಜೆ  ಇಡಲು ಸೂಚಿಸಿದರು.

RELATED ARTICLES  ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸೋಮಶೇಖರ ಗಾಂವಕರ ಮಾತನಾಡಿ ದೈಹಿಕ ಚಟುವಟಿಕೆಗಳಿಲ್ಲದೆ ಇಂದು ಕಾಯಿಲೆಗಳು ಯುವ ಸಮುದಾಯವನ್ನು ಕಾಡುತ್ತಿದೆ, ನಾವು ಸದೃಢ ಶರೀರಿಗಳಾಗಬೇಕಾಗಿದೆ. ಗುರಿ ಸಾಧನೆಗೆ ಅಗತ್ಯವಾದ ನಮ್ಮ ಸಾಮರ್ಥ್ಯದ ಖಾತ್ರಿ ಮಾಡಿಕೊಳ್ಳಬೇಕು. ಆಯ್ಕೆ ಮಾಡುವ ವಿಷಯಗಳಿಗೆ ಸಿಗಬಹುದಾದ ಅವಕಾಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪ್ರೋ. ವಿದ್ಯಾ ತಲಗೇರಿ ಪರಿಚಯಿಸಿ ಸ್ವಾಗತಿಸಿದರು. ಕುಮಾರ ನಿಧಿ ಭಟ್ಟ ಮತ್ತು ಕುಮಾರಿ ಸ್ನೇಹಾ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಗಣೇಶ ಭಟ್ಟ ವಂದಿಸಿದರು. ಕುಮಾರಿ ವೈಷ್ಣವಿ ಭಟ್ಟ ನಿರೂಪಿಸಿದರು. ಡಾ. ಎನ್ ಡಿ ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ವಿವಿಧ ವಿಭಾಗಗಳ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.