ಕುಮಟಾ : ರಸ್ತೆಯಲ್ಲಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯಲ್ಲಿ ಬಿದ್ದು ಬೈಕ್ ಸವಾರನೋರ್ವನನ್ನು, ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಅಳ್ವ್ವೆಕೋಡಿ ಗ್ಯಾಸ್ ಪಂಪ್ ಹತ್ತಿರ ನಡೆದಿದೆ.
ತಾಲೂಕಿನ ಹೆರವಟ್ಟಾದ ದೇವು ಕನ್ಯಾ ಗೌಡ (43) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ವ್ಯಕ್ತಿ, ಈತ ತನ್ನ ಮೋಟಾರ್ ಸೈಕಲನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ಅಡ್ಡ ಬಂದ ನಾಯಿಯನ್ನು ನೋಡಿ ಒಮ್ಮೇಲೆ ತನ್ನ ಮೋಟಾರ ಸೈಕಲ್ ಬ್ರೇಕ್ ಹಾಕಿ ಮೋಟಾರ ಸೈಕಲ್ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದು ಅವಘಡ ಸಂಭವಿಸಿದೆ.
RELATED ARTICLES ರೀಡ್ ಆಗದ ಫಾಸ್ಟ್ ಟ್ಯಾಗ್ : ಪ್ರಯಾಣಿಕರ ಮೇಲೆ ಹಲ್ಲೆಮಾಡಿದ ಟೋಲ್ ಸಿಬ್ಬಂದಿ : ದಾಖಲಾಯ್ತು ದೂರು.
ಅಪಘಾತದಲ್ಲಿ ತನ್ನ ಕೈ ಕಾಲಿಗೆ ತೆರಚಿದ ಗಾಯ ಮತ್ತು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನನಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ದೇವು ಗೌಡ ಅವರು ಮೃತಪಟ್ಟಿದ್ದಾರೆ.