ಕುಮಟಾ : ಕೊಂಕಣಿ ಪರಿಷದ್ ಉತ್ತರಕನ್ನಡ ಪ್ರಾಯೋಜಿತ, ದಿ‌. ಮಾಧವ ಮಂಜುನಾಥ ಶಾನಭಾಗ ದತ್ತಿನಿಧಿ ಕೊಂಕಣಿ ಸಾಂಸ್ಕೃತಿಕ ಸ್ಪರ್ಧಾಕಾರ್ಯಕ್ರಮ ಇಲ್ಲಿನ ಕೊಂಕಣ ಎಜ್ಯಕೇಶನ್ ಟ್ರಸ್ಟ ನ ಸಿ.ವಿ.ಎಸ್. ಕೆ ಪ್ರೌಢಶಾಲೆಯಲ್ಲಿ ಜರುಗಿತು. ಕೊಂಕಣಿ ಭಾಷೆಯ ವಿವಿಧ ಸ್ಪರ್ಧೆಯಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆ, ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಗಿ, ಗಿಬ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಗಿಬ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಮುಖ್ಯ ನಿರ್ಣಾಯಕರಾಗಿ ಆಗಮಿಸಿದ  ಅರುಣ ಮಣಕೀಕರ್ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಕೊಂಕಣಿ ಭಾಷೆಗಾಗಿ ಮಾಧವ ಮಂಜುನಾಥ ಶಾನಭಾಗ ಅವರು ತಮ್ಮ ಬದುಕನ್ನೇ ಮುಡುಪಾಗಿಟ್ಟು. ಭಾಷೆಯ ಅಭಿವೃದ್ಧಿಗಾಗಿ ಹಗಲಿರುಳು ಹೋರಾಡಿ ಕೊಂಕಣಿ ಪರಿಷದ್ ಸ್ಥಾಪಿಸಿ ಪರಿಶ್ರಮ ಪಟ್ಟರು. ಕೊಂಕಣಿ ಇಂದು ರಾಷ್ಟ್ರೀಯ ಮಾನ್ಯತೆ ಪಡೆದ ಭಾಷೆ ಆಗಿದೆ. ಕೊಂಕಣಿಗ ಸರ್ವ ಸಮುದಾಯಗಳು ಭಾಷೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.

RELATED ARTICLES  ಸೇಡು..! ಸೇಡು...! ಸೇಡು..! ಅನಂತಕುಮಾರ್ ಹೆಗಡೆ ಹೇಳಿದ್ದೇನು?

ವೇದಿಕೆಯಲ್ಲಿ ನಿರ್ಣಾಯಕರಾಗಿ ಆಗಮಿಸಿದ ರೋಹಿದಾಸ ಗಾವಡಿ, ಶಿಕ್ಷಕಿ ಶೈಲಾ ಗುನಗಿ , ಸಲಹೆಗಾರ ಆರ್.ಎಚ್ ದೇಶಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಸುಮಾ ಪ್ರಭು ವಹಿಸಿದ್ದರು. ಭಾಷೆಯ ಉಳಿವಿಗಾಗಿ ಎಲ್ಲರೂ ಕೊಂಕಣಿಯಲ್ಲೇ ವ್ಯವಹರಿಸಬೇಕೆಂದು ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಕರೆನೀಡಿದರು. ಕೊಂಕಣಿ ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದ್ದರು.

RELATED ARTICLES  ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿ ಗಳ ಸಾಧನೆ

ಕೊಂಕಣಿ ಭಕ್ತಿ ಗೀತೆ  ಸ್ಪರ್ಧೆಯಲ್ಲಿ ಯುತಿಕಾ ಪ್ರಥಮ, ಅಮೂಲ್ಯ ಮಾರುತಿ ಪೈ ದ್ವಿತೀಯ, ಮಹಾಲಕ್ಷ್ಮಿ ನಾಗರಾಜ ಶಾನಭಾಗ ತೃತೀಯ ಸ್ಥಾನ ಪಡೆದರು. ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಸುಹಾಸಿನಿ ಜಿ. ಪೈ, ಯುಕ್ತಿ ಎನ್. ಶಾನಭಾಗ, ಶ್ರೀಲಕ್ಷ್ಮಿ ಎನ್. ಪೈ ಕ್ರಮವಾಗಿ ಬಹುಮಾನ ಪಡೆದರು. ಕೊಂಕಣಿ ಕವನವಾಚನದಲ್ಲಿ ಸ್ವಾತಿ ಬಾಳಗಿ ಪ್ರಥಮ, ಶ್ರೇಯಾ ಪಿ. ಶೇಟ್ ದ್ವಿತೀಯ, ಸ್ಮೃತಿ ವಿ. ಶೇಟ್  ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.