ಕುಮಟಾ : ನಿಸರ್ಗದಾರಿ ರೈತ ಉತ್ಪಾದಕರ ಸಂಸ್ಥೆ ಮಿರ್ಜಾನ್ ಇವರ ಸಹಯೋಗದಲ್ಲಿ ಕತಗಾಲದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಗಜಾನನ ಪೈಯವರ ತೋಟದಲ್ಲಿ ಅಡಿಕೆ ಬೆಳೆಯಲ್ಲಿನ ಎಲೆಚುಕ್ಕೆ ರೋಗ ನಿರ್ವಹಣೆಯ ಕುರಿತು ಕಾರ್ಯಾಗಾರ ನಡೆಯಿತು.
ಡಾ. ಮಂಜುನಾಥ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ರೈತರಿಗೆ ಎಲೆ ಚುಕ್ಕಿ ರೋಗ ನಿರ್ವಹಣೆಯ ಜೊತೆಗೆ ಸಮಗ್ರ ಕೃಷಿ ಬಗ್ಗೆ ತುಂಬಾ ಮಾಹಿತಿ ನೀಡಿದರು. ಅಡಿಕೆ, ತೆಂಗು, ಕಾಳುಮೆಣಸು, ಜಾಯಿಕಾಯಿ ಸೇರಿದಂತೆ ಎಲ್ಲಾ ಕೃಷಿ ಬಗ್ಗೆ ರೋಗ ನಿರ್ವಹಣೆ, ಇಳುವರಿ ಹೆಚ್ಚಳ ಮಾಡುವುದು, ಗೊಬ್ಬರ ಹಾಕುವ ವಿಧಾನ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಪ್ರಾತ್ಯಕ್ಷಿಕೆ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಧರ ಪೈ, ರಾಜೀವ ಭಟ್ಟ, ಮಹೇಶ ದೇಶಬಂಡಾರಿಯವರು ಮತ್ತು ಶಿರಸಿಯ ಪ್ರಶಾಂತ ನಾಯ್ಕ, ನಿಸರ್ಗಧಾರಿ ಸಂಸ್ಥೆಯ ಮಂಜುನಾಥ ಮರಾಠಿ, ಸುರೇಶ ಗೌಡ ಸೇರಿದಂತೆ ಕತಗಾಲ, ಶಿರಗುಂಜಿ, ಹೆಬೈಲ, ಬೆಳ್ಳಂಗಿ, ಶೇಡಿಗದ್ದೆ ಭಾಗದ ಆಸಕ್ತ ಕೃಷಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.