ಶಿರಸಿ : ತಾಲೂಕಿನ ಬಂಕನಾಳ ಕ್ರಾಸ್ ಸಮೀಪದ ನಿವಾಸಿ, ಜಂಗಲ್ ಕಟಿಂಗ್ ಉದ್ಯೋಗಿ ನಾಗರಾಜ ಕೃಷ್ಣಪ್ಪ ಲಮಾಣಿ (22) ಕಿರಾಣಿ ಸಾಮಗ್ರಿಗಳನ್ನು ತರುತ್ತೇನೆಂದು ಪೇಟೆಗೆ ತೆರಳಿದ್ದ, ಆದರೆ ವಾಪಸ್ಸಾಗದ ಕಾರಣದಿಂದ ಆತ ನಾಪತ್ತೆಯಾದ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅಂಗವಿಕಲ ಬಡ ಕುಟುಂಬದವರಿಗೆ ನೆರವಾದ ರವಿಕುಮಾರ್ ಶೆಟ್ಟಿ.

ನಾಗರಾಜ ತಾಲೂಕಿನ ಉಗ್ರಮನೆ ಬಿಡಾರದಿಂದ ಕಿರಾಣಿ ಹಾಗೂ ತರಕಾರಿ ಸಾಮಗ್ರಿಗಳನ್ನು ತೆಗೆದುಕೊಂಡು ಬರಲು ಶಿರಸಿ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೂ ಬಿಡಾರಕ್ಕೆ ಬರದೇ ಹಾಗೂ ಮನೆಗೂ ಬರದೇ ಎಲ್ಲಿಯೋ ಹೋಗಿ ಕಾಣಿಯಾಗಿದ್ದಾರೆ ಎಂದು ಪತ್ನಿ ಕವಿತಾ ನಾಗರಾಜ ಲಮಾಣಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಸುಬ್ರಾಯ ವಾಳ್ಕೆ ನಿರ್ಮಾಣದ ಚಿತ್ರ ಲೋಕಲ್ ಟ್ರೈನ್ ನ ಟ್ರೈಲರ್ ಬಿಡುಗಡೆ ಇಂದು.