ಭಟ್ಕಳ: ಕಪ್ಪು ಬಣ್ಣದ ಪ್ಲಾಸ್ಟಿಕ್ ಮುಖ ಕವಚ ಧರಿಸಿದ ಕಳ್ಳರಿಬ್ಬರು ಗ್ಯಾರೇಜ್ ಶಟರ್ ಮುರಿದು ನಗದು ಹಾಗೂ ಮೊಬೈಲ್ ಕದ್ದು ಪರಾರಿಯಾದ ಘಟನೆ ಮಣ್ಕುಳಿ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವಾನಂದ ಗ್ಯಾರೇಜ್‌ನಲ್ಲಿ ನಡೆದಿದ್ದು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಣ್ಕುಳಿಯ ಶಂಕರ ಶೆಟ್ಟಿ ಮಾಲೀಕತ್ವದ ಗ್ಯಾರೇಜ್‌ನಲ್ಲಿ ಕಳ್ಳತನವಾಗಿದ್ದು, ಕಳ್ಳರಿಬ್ಬರು ರಾತ್ರಿ ವೇಳೆ ಮುಸುಕುದಾರಿ ಕವಚ ಧರಿಸಿ, ಗ್ಯಾರೇಜ್ ಶಟರ್ ಮುರಿದು ಒಳ ನುಗ್ಗಿದ್ದು, ಕಪಾಟನ್ನು ಒಡೆದು ಕಪಾಟಿನಲ್ಲಿದ್ದ ಸುಮಾರು 1.40 ಸಾವಿರ ನಗದು ಹಾಗೂ ಸ್ಯಾಮಸಂಗ್ ಗೆಲೆಕ್ಸಿ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

RELATED ARTICLES  ಪ್ರೋ. ಚಿದಾನಂದ ಗಣಪತಿ‌ ನಾಯ್ಕರಿಗೆ ಪಿ.ಹೆಚ್.ಡಿ.

ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿನಿಮೀಯ ರೀತಿಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಮುಖ ಕವಚ ಧರಿಸಿ ಕಳ್ಳತನ ನಡೆಸಲಾಗಿದೆ. ಮುಂಜಾನೆ ಮಾಲಿಕ ಶಂಕರ ಶೆಟ್ಟಿ ಗ್ಯಾರೇಜ್ ಬಳಿ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಧ್ಯಾಹ್ನ ಕಾರವಾರದ ಶ್ವಾನದಳ ತಂಡದಿಂದ ಪರಿಶೀಲನೆ ನಡೆಸಲಾಗಿದೆ.

RELATED ARTICLES  ಭಟ್ಕಳದ ಏಐಟಿಎಮ್ (AITM) ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ