ಕಾರವಾರ: ಬೈತಖೋಲ್ ಹಾಗೂ ಅಳ್ಳೇವಾಡದ ಕಡಲತೀರದಲ್ಲಿ ಬೋಟ್‌ಗಳ ಇಂಜಿನ್ ಗಳನ್ನು ಕಳ್ಳತನ ಮಾಡಿದ ಪ್ರಕರಣ ನಡೆದಿತ್ತು. ಇತ್ತೀಚೆಗೆ ಈ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಬ್ ಇನ್ಸ್‌ ಪೆಕ್ಟ‌ರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಅದರಂತೆ ಖಚಿತ ಮಹಿತಿ ಆಧರಿಸಿ ಗೋವಾಗೆ ತೆರಳಿ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

RELATED ARTICLES  ಗಾಳಿಪಟ ಹಾರಾಟ ಸ್ಪರ್ಧೆ ಹಾಗೂ ತಿಂಡಿ ತಿನಿಸುಗಳ ಸ್ಪರ್ಧೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನಿಂದ ಸ್ಕೂಟ‌ರ್ ಜೊತೆ ನಾಲ್ಕು ಪೆಟ್ರೋಲ್ ಇಂಜಿನ್ ವಶಕ್ಕೆ ಪಡೆದಿದ್ದಾರೆ. ಗೋವಾ ಪಣಜಿಯ ಡೋನೊಪೌಲದ ಆಂಟನೀಯೊ ಬಂಧಿತ ಆರೋಪಿ.

RELATED ARTICLES  ಕೈಗಾ ಅಣು ವಿದ್ಯುತ್ ನಿಗಮದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ.

ಸಬ್ ಇನ್ಸ್‌ಪೆಕ್ಟರ್ ಕುಮಾರ್ ಕಾಂಬ್ಳೆ, ಸಿಬ್ಬಂದಿಗಳಾದ ಸೂರಜ್ ಕೊಠಾರಕರ್, ರಾಜೇಶ ನಾಯಕ, ಮಕ್ತುಮಸಾಬ್ ಪತ್ತೆಖಾನ್, ನಾಮದೇವ ನಾಂದ್ರೆ, ರಮೇಶ ನಿಂಬರಗಿ, ಪ್ರಕಾಶ ದಂಡಪ್ಪನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.