ಕುಮಟಾ : ಮಹಿಳೆಯರನ್ನು ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ರಚನಾತ್ಮಕವಾಗಿ ಮುಖ್ಯವಾಹಿನಿಗೆ ತರುವುದು ಮತ್ತು ಜಾಗೃತಗೊಳಿಸುವ ಅನಿವಾರ್ಯತೆ ಇದ್ದು, ಜೊತೆ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಮಾತ್ರ ಜವಾಬ್ದಾರಿಯನ್ನು ಹೊತ್ತ, ಮಾತೆಯರಲ್ಲಿ ಅರಿವು ಮೂಡಿಸುವ ಕುರಿತಾಗಿ ವಿಶೇಷ ಲಕ್ಷ್ಯವಹಿಸಿ, ಪಟ್ಟಣದ ಗಿಬ್ ಹೈಸ್ಕೂಲ್ ಆವಾರದಲ್ಲಿ ಡಿ.10 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ‘ಶಕ್ತಿ ಸಂಚಯ – ಮಹಿಳಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಕಲಾವತಿ ಭಟ್ಟ ಹೇಳಿದರು. ಪಟ್ಟಣದ ವನವಾಸಿ ಕಲ್ಯಾಣ ಸಭಾಭವನದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ ತಾಲೂಕುಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು. ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾದುದು, ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತಕ್ಕಾಗಿ ಶಕ್ತಿ ಸಂಚಯ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

RELATED ARTICLES  ಕುಮಟಾ ಶಾಸಕರ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ.

ಜಿಲ್ಲಾ ಸಂಯೋಜಕಿ ಡಾ.ಶ್ರೀದೇವಿ ಸುರೇಶ ಭಟ್ಟ ಮಾತನಾಡಿ, ಕಾರ್ಯಕ್ರಮವನ್ನು ಕುಮಟಾ ಸಬ್ ಇನ್ಸ್‍ಪೆಕ್ಟರ್ ಪದ್ಮಾ ದೇವಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ.ಎ.ವಿ.ಬಾಳಿಗಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರೇವತಿ ರಾವ್, ಲೇಖಕಿ ಡಾ. ನೀತಾ ರಾವ್, ಭಾರತೀಯ ಚಿಂತನೆಯಲ್ಲಿ ಮಹಿಳೆಯ ಪಾತ್ರ ಕುರಿತು ಭಾರತೀಯ ಕಿಸಾನ್ ಸಂಘದ ಕಾಯದರ್ಶಿ ವೀಣಾ ಸತೀಶ ಶಿವಮೊಗ್ಗಾ, ಭಾರತದ ವಿಕಸನದಲ್ಲಿ ಮಹಿಳೆಯರ ಪಾತ್ರ ಕುರಿತು ಖ್ಯಾತ ಪಾರಂಪರಿಕ ನೃತ್ಯ ಶಿಕ್ಷಕಿ ವಿದುಷಿ ನಯನಾ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸುತ್ತಾ, ಬೆಳಿಗ್ಗೆ 11.30 ಗಂಟೆಗೆ ಸ್ಥಾನೀಯ ಮಹಿಳೆಯರ ಸ್ಥಿತಿಗತಿ, ಪ್ರಶ್ನೆ ಮತ್ತು ಪರಿಹಾರದ ಕುರಿತು ಚರ್ಚಾ ಗೋಷ್ಠಿ ನಡೆಯಲಿದೆ ಎಂದರು.

RELATED ARTICLES  ಕುಮಟಾದಲ್ಲಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ.

ಈ ಸಂದರ್ಭದಲ್ಲಿ ಮಹಿಳಾ ಸಮಾವೇಶದ ಪ್ರಮುಖರಾದ ಮಹಾಲಕ್ಷ್ಮೀ ಹೆಗಡೆ, ಜಯಾ ಶಾನಭಾಗ, ಸುಖನ್ಯಾ ಗುನಗಾ, ರೇಖಾ ಹೆಗಡೆ, ನೀತಾ ಭಂಡಾರ್ಕರ್, ಜಯಶ್ರೀ ವಿಷ್ಣು ಕಾಮತ್, ಗೀತಾ ಮುಕ್ರಿ, ದೀಪಾ ನಾಯ್ಕ, ಸ್ವಾತಿ ಬಳಗಂಡಿ, ಸುಖನ್ಯಾ ಗುನಗಾ, ಜಯಾ ಶಾನಭಾಗ, ರಾಜೇಶ್ವರಿ ರಾಜು ಗುನಗಾ, ವಿದ್ಯಾ ರಾಮಕೃಷ್ಣ ಕಾಮತ್ ಇತರರು ಇದ್ದರು.