ಶಿರಸಿ: ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯ ಚಂದ್ರಶೇಖರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಮುಗಿಲೆತ್ತರದ ಸಾಧನೆ ಮಾಡಿದ್ದಾಳೆ.

10 ನೇ ತರಗತಿ ವಿದ್ಯಾರ್ಥಿನಿಯಾದ ಧನ್ಯ ಚಂದ್ರಶೇಖರ್ ಹ್ಯಾಮರ್ ಎಸೆತದಲ್ಲಿ 43.34 ಮೀಟರ್ ದೂರ ಎಸೆದು ಕರ್ನಾಟಕ ರಾಜ್ಯದ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರೆ, ಚಕ್ರ ಎಸೆತದಲ್ಲಿಯೂ ಕೂಡಾ 9 ಮೀಟರ್ ದೂರ ಎಸೆದು ಬಂಗಾರದ ಪದಕ ಪಡೆದಿದ್ದಾಳೆ.

RELATED ARTICLES  ನಿಲ್ಲಿಸಿಟ್ಟ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್.

ದೈಹಿಕ ಶಿಕ್ಷಕ ಪ್ರವೀಣ ಕುರಬರ್ ವಿದ್ಯಾರ್ಥಿಗೆ ತರಬೇತಿ ನೀಡಿದ್ದಾರೆ. ಈಕೆಯ ಸಾಧನೆಗೆ ಪಾಲಕರು, ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

RELATED ARTICLES  ಸ್ವರ್ಣವಲ್ಲೀಯಲ್ಲಿ ಪ್ರಾರಂಭವಾದ ಶಿಷ್ಯ ಸ್ವೀಕಾರ ವಿಧಿ ವಿಧಾನ : ಗಣ್ಯರ ಉಪಸ್ಥಿತಿ : ಹಲವಾರು ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭ.