ಕುಮಟಾ : ಡಯಟ್ ಕುಮಟಾದವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಉತ್ತಮ ಪ್ರಾಯೋಗಿಕ ಶಾಲೆ ಪ್ರಸ್ತುತಿಯಲ್ಲಿ ಕುಮಟಾ ತಾಲೂಕಿನ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಯ ಉತ್ತಮ ಪ್ರಾಯೋಗಿಕ ಶಾಲೆಯಾಗಿ ಹೊರಹೊಮ್ಮಿದೆ.
ಡಯಟ್ ಕುಮಟಾದಲ್ಲಿ ನಡೆದ ಪ್ರಸ್ತುತಿಯಲ್ಲಿ ಜಿಲ್ಲೆಯ 25 ಪ್ರಾಥಮಿಕ , ಪ್ರೌಢ ಶಾಲೆಗಳು ಭಾಗವಹಿಸಿದ್ದು ಅಂತಿಮವಾಗಿ ನಾವಿನ್ಯಯುತ ಚಟುವಟಿಕೆಗಳ ಕುರಿತು ವಿಷಯ ಮಂಡನೆ ಮಾಡಿದ ಹೊಲನಗದ್ದೆ ಶಾಲೆಯ ರವೀಂದ್ರ ಭಟ್ಟ ಸೂರಿ ಪ್ರಥಮ ಸ್ಥಾನ ಪಡೆದರು.
ಸಮುದಾಯದ ಸಹಭಾಗಿತ್ವ, ನಾವಿನ್ಯಯುತ ಚಟುವಟಿಕೆಗಳು, ತಂತ್ರಜ್ಞಾನ ಆಧಾರಿತ ಬೋಧನೆ ಮುಂತಾದ ಅಂಶಗಳನ್ನು ಪರಿಗಣಿಸಿ ಹೊಲನಗದ್ದೆ ಶಾಲೆಗೆ ಪ್ರಥಮ ಸ್ಥಾನ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದರು.
ಕುಮಟಾ ತಾಲೂಕಿಗೆ ಯಶಸ್ಸು ತಂದುಕೊಟ್ಟ ಹೊಲನಗದ್ದೆ ಶಾಲೆ ಹಾಗೂ ಅಲ್ಲಿಯ ಶಿಕ್ಷಕ ರವೀಂದ್ರ ಭಟ್ಟ ಸೂರಿಯವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ, ಸಮನ್ವಯಾಧಿಕಾರಿಗಳಾದ ರೇಖಾ ಸಿ ನಾಯ್ಕ, ಬಿ.ಆರ್.ಪಿ.ಗಳಾದ ರಾಘವೇಂದ್ರ ಹೆಗಡೆ, ನಾಗರಾಜ ಶೆಟ್ಟಿ, ಸಿ.ಆರ್.ಪಿ.ಗಳಾದ ಮಹೇಶ ನಾಯ್ಕ ಅಭಿನಂದಿಸಿದ್ದಾರೆ.