ಶಿರಸಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ಮಾಡಿ, ಇಂದು ಸದನದಲ್ಲಿ ಜಿಲ್ಲೆಯ ನಾಲ್ಕು ಶಾಸಕರು ವಿಷಯ ಪ್ರಸ್ತಾಪಿಸುವಂತೆ ಮಾಡುವಲ್ಲಿ ಶಿರಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಯಶಸ್ವಿಯಾಗಿದ್ದಾರೆ.

ಇಂದು ಶಿರಸಿಯ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಎದುರು ಜಿಲ್ಲೆಯ ನೂರಾರು ಜನರೊಂದಿಗೆ ಧರಣಿ ಸತ್ಯಾಗ್ರಹ ನಡೆಸಿ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಅವರ ಮೂಲಕ‌ ಮನವಿ ಸರ್ಕಾರಕ್ಕೆ‌ ಮನವಿ ನೀಡಿದರು. ಹಾಗೂ ಧರಣಿ‌ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲೆಯವರಾದ ಮಾಜಿ ಸಚಿವ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್, ಶಾಸಕರಾದ ಭೀಮಣ್ಣ ನಾಯ್ಕ, ದಿನಕರ್ ಶೆಟ್ಟಿ, ಸತೀಶ್ ಸೈಲ್ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಚಲುವಾದಿ ನಾರಾಯಣಸ್ವಾಮಿ ಹಾಗೂ ಕೇಶವಪ್ರಸಾದ ಭೇಟಿ ನೀಡಿ ಸದನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಯಲ್ಲಾಪುರ‌ ಶಾಸಕ ಶಿವರಾಮ್ ಹೆಬ್ಬಾರ ಭೇಟಿ ನೀಡಿ, ಧರಣಿ ನಿರತರ ಮಾತನ್ನು ಆಲಿಸಿದ ಅವರು ಮಾತನಾಡುತ್ತಾ, ಹದಿನೈದು ವರ್ಷಗಳ ಹಿಂದಿನಿಂದಲೂ ಜಿಲ್ಲೆಯಲ್ಲಿ ಈ ಬೇಡಿಕೆ ಇದ್ದು, ಇನ್ನೂ ತಾರ್ಕಿಕ ಹಂತಕ್ಕೆ ಬಂದು ತಲುಪಿಲ್ಲ, ಇಂದು ಕೂಡ ಸದನದಲ್ಲಿ ಚರ್ಚೆಯಾಗಿದೆ. ಆದರೆ ನಾನು ಮಾತ್ರ ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೆ ಒಂದು ಆಗಲಿ ಎನ್ನುವ ಆಸೆ ಇದೆ. ಈ ಬಗ್ಗೆ ಸದಸದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

RELATED ARTICLES  ಆಲೆಮನೆ ಹಬ್ಬಕ್ಕೆ ಚಾಲನೆ; ವಿಶೇಷ ಖಾದ್ಯಗಳ ರಸದೌತಣ

ನಂತರ ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಶಾಸಕ ದಿನಕರ್ ಶೆಟ್ಟಿ ಮಾತನಾಡಿತ್ತಾ, ಈ ಹಿಂದೆ ಜಿಲ್ಲೆಯ ಜನರು ಬೇಡಿಕೆ ಇಟ್ಟಾಗ ನಾನು ಅಂದಿನ‌ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕಿ ಬಜೆಟ್ ನಲ್ಲಿ ಘೋಷಣೆ ಮಾಡಿಸಿದ್ದೆ. ಕೊನೆಯಲ್ಲಿ ಬಜೆಟ್ ಮಂಡನೆಯಾದ್ದರಿಂದ ಹಣ ಬಿಡುಗಡೆಯಾಗಿಲ್ಲ. ಈಗೀನ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಇಂದಿನ ಈ ಹೋರಾಟವನ್ನು ಬೆಳಗಾವಿಯ ಅಧಿವೇಶನದ ವರೆಗೂ ತರುವಲ್ಲಿ ಅನಂತಮೂರ್ತಿ ಹೆಗಡೆ ಅವರು ಬಹು ಮುಖ್ಯರು. ಅವರು ಎಲ್ಲಿ ಹೋರಾಟ ಮಾಡಿತ್ತಿದ್ದಾರೋ ಅಲ್ಲಿ ಬಂದು ಬೆಂಬಲ ನೀಡುತ್ತಿದ್ದೇನೆ ಮತ್ತು ಮುಂದೆಯೂ ನೀಡುತ್ತೇನೆ‌ ಎಂದರು.

ನಂತರ ಶಿರಸಿ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಮಾತನಾಡುತ್ತಾ, ನಾನು ಈ ಬಗ್ಗೆ ಸದನಸಲ್ಲಿ ಪ್ರಸ್ತಾಪಿಸಿ, ಆರೋಗ್ಯ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ ಜಿಲ್ಲೆಯ ಜನರ ಬೇಡಿಕೆ ಈಡೇರಿಕೆಗೆ ಪ್ರಯತ್ನ ಮಾಡುವುದಾಗಿ ತಿಳಸಿದರು.
ನಂತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾರವಾರ ಶಾಸಕ ಸತೀಸ್ ಸೈಲ್ ಮಾತನಾಡಿ, ಈಗಗಲೇ ಸರ್ಕಾರ ಕಾರವಾರದಲ್ಲಿ ಮೆಡಿಕಲ್‌ ಕಾಲೇಜು ನೀಡಿದೆ, ಆದ್ದರಿಂದ ಶಿರಸಿಯ ಭಾಗದಲ್ಲಿ ನಗರದಿಂದ 5 ಕಿ.ಮೀಟರ್ ಸಮೀಪದಲ್ಲಿ ಜಾಗ ಇದ್ದರೆ ಖಾಸಗಿ ಸಹಭಾಗಿತ್ವ ದಲ್ಲಿ ಆಸ್ಪತ್ರೆ ಮಾಡುವುದು ಉತ್ತಮ. ಆದಷ್ಟೂ ಶೀಘ್ರವಾಗಿ ಎಲ್ಲೂವು ಆಗುತ್ತದೆ ಎಂದರು.

RELATED ARTICLES  ಕುಮಟಾ : ನಾಳೆಯಿಂದ ಎಲ್ಲಾ ಸ್ಥಾವರಗಳ ಮೀಟರ್ ರೀಡಿಂಗ್ : ಹೆಸ್ಕಾಂ ಪ್ರಕಟಣೆ.

ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ಚಲುವಾದಿ ನಾರಾಯಣ ಸ್ವಾಮಿ ಹಾಗೂ ಕೇಶವ ಪ್ರಸಾದ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಆಗಮಿಸಿ , ನಾವು ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪಿಸಿ, ಈ ಬಗ್ಗೆ ನಮ್ಮ ಶಾಸಕಾಂಗ ಸಭೆಯಲ್ಲೂ ಚರ್ಚಿಸಿ ಸರ್ಕಾರಕ್ಕೆ ಒತ್ತಡ ಹಾಕುವುದಾಗಿ ತಿಳಿಸಿದರು.

ಧರಣಿ ಸತ್ಯಾಗ್ರಹ ದ ರೂವಾರಿ ಅನಂತಮೂರ್ತಿ ಹೆಗಡೆ ಮಾತನಾಡಿ, ನಮ್ಮ ಈ ಹೋರಾಟದಿಂದ ಜಿಲ್ಲೆಯ ಶಾಸಕರು ಸದನದಲ್ಲಿ ವಿಷಯ ಪ್ತಸ್ತಾಪಿಸಿದ್ದಾರೆ. ಇದಕ್ಕೆ ನನ್ನ ಹೋರಾಟವೇ ಕಾರಣ, ಈ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಆಸ್ಪತ್ರೆಗೆ ಆಗುವವರೆಗೂ ನಮ್ಮ ಈ ಹೋರಾಟ ನಿರಂತರ ಎಂದರು.

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ‌ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಎನ್ ‌ಹೆಗಡೆ, ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ, ಯಲ್ಲಾಪುರ ಆಟೋ‌ಚಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ, ಸಂತೋಷ ಬ್ಯಾಗದ್ದೆ, ಸತೀಶ ಬ್ಯಾಗದ್ದೆ, ರಾಜು ಬಿಕನಳ್ಳಿ ಸೇರಿದಂತೆ ಜಿಲ್ಲೆಯಿಂದ ನೂರಾರು ಜನರು ಆಗಮಿಸಿ ಧರಣಿಯಲ್ಲಿ ಭಾಗಿಯಾಗಿದ್ದರು.