ಶಿರಸಿ : ಶಿರಸಿ ತಾಲೂಕಿನ ಬಂಡಲದ ಪೆಟ್ರೋಲ್ ಬಂಕ್ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗೂ ಕಾರು ಅಪಘಾತವಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಕೆಎಸ್ಆರ್‌ಟಿಸಿ ಬಸ್ ಶಿರಸಿ ಕಡೆಯಿಂದ ಭಟ್ಕಳಕ್ಕೆ ಚಲಿಸುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಬಂಡಲ್ ಪೆಟ್ರೋಲ್ ಬಂಕ್ ಬಳಿ ಮುಖಾಮುಖಿ ಡಿಕ್ಕಿ ಸಂಬಂವಿಸಿದೆ ಅಪಘಾತದ ಭೀಕರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಮೃತಪಟ್ಟಿರುವವರು ತಮಿಳುನಾಡು ಮೂಲದವರು ಎಂಬುದು ಗೋತ್ತಾಗಿದೆ.

RELATED ARTICLES  ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ

ಇನ್ನೂ ಬಸ್ ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟಗಾಯವಾಗಿದ್ದು, ಗಾಯಗೊಂಡವರನ್ನು ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

RELATED ARTICLES  ಸೌರ ಮಂಡಲದಲ್ಲಿದೆ ಒಂಬತ್ತನೇ ಗ್ರಹ!