ಹೊನ್ನಾವರ : ಗುಣವಂತೆಯಲ್ಲಿ ಭಾರಿ ಪ್ರಮಾಣದ ಸರಣಿ ಅಪಘಾತ ಒಂದು ಸಂಭವಿಸಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ಗುಣವಂತೆಯ ಕೇಂದ್ರ ಸ್ಥಳದ ಸರ್ಕಲ್ಲಿನಲ್ಲಿ ಮಾಳ್ಕೋಡ್ ಗುಣವಂತೆ ರಸ್ತೆಯಿಂದ ಬಂದ ಮಾರುತಿ ಸುಜುಕಿ ಕಾರೊಂದು, ಹೊನ್ನಾವರ ಕಡೆ ನುಗ್ಗಿದಾಗ ಮಂಗಳೂರಿನ ಕಡೆಯಿಂದ ಬರುತ್ತಿರುವ ಗ್ಯಾಸ್ ಟ್ಯಾಂಕರ್ ಕಾರಿಗೆ ಗುದ್ದಿದೆ. ಬ್ರೇಕ್ ಹಾಕಿದ ಟ್ಯಾಂಕರ್ ಅಲ್ಲೇ ಪಲ್ಟಿ ಯಾಗಿದ್ದು, ಅಲ್ಲೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ 3 ವಾಹನಗಳಿಗೆ ತಾಗಿ ಅವು ಪರಸ್ಪರ ಗುದ್ದಿ ಕೊಂಡಿದೆ. ಅದ್ರಷ್ಟವಸಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.

RELATED ARTICLES  ಎಸ್.ಡಿ.ಎಂ. ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ.ರೇಣುಕಾದೇವಿ ಗೋಳಿಕಟ್ಟೆ.

ಟ್ಯಾಂಕರ್ ಚಾಲನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೊನ್ನಾವರದ ಆಸ್ಪತ್ರೆಗೆ ಕಳುಹಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ನಿಂತ ಉಳಿದ 3 ವಾಹನದ ಚಾಲಕರು ಹಾಗೂ ಹಮಾಲಿಗಳು ಊಟಕ್ಕೆ ಹೋಗಿದ್ದ ಕಾರಣ ಬಚಾವ್ ಆಗಿದ್ದಾರೆ.

RELATED ARTICLES  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆ

ಕಾರಿನೊಳಗೆ ಕಾರವಾರದವರಿದ್ದು, ಯಾರಿಗೂ ಯಾವುದೇ ತೀವ್ರ ಪೆಟ್ಟಾಗಿಲ್ಲ. ತುಂಬಿದ ಗ್ಯಾಸ್ ಟ್ಯಾಂಕ್ ಇದಾಗಿದ್ದು ಮಂಗಳೂರಿನಿಂದ ಗೋವಾಕ್ಕೆ ಹೋಗುತ್ತಿತ್ತು. ಯಾವುದೇ ಹೆಚ್ಚಿನ ಅಪಾಯ ಆಗದೇ ಗುಣವಂತೆಯಲ್ಲಿ ಬಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಮಂಕಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ತಂಡವು ಬಂದಿದೆ. ಹೆಚ್ಚಿನ ಸುರಕ್ಷತೆಯ ಕಾರಣಕ್ಕೆ ಅಕ್ಕ ಪಕ್ಕದ ಅಂಗಡಿ ಬಾಗಿಲು ಹಾಕಿಸಿದ್ದಾರೆ.