ಕುಮಟಾ : ಡಾ. ಎ, ವಿ, ಬಾಳಿಗಾ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಸಂಭವನಿಯ ಅಪಾದಿಂದ ಪಾರಾಗುವ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಅಗ್ನಿಶಾಮಕ ದಳದ ಎಸ್. ಪಿ. ರಾಘವೇಂದ್ರ ಪಟಗಾರ ಮಾಹಿತಿ ನೀಡಿ ಎಲ್.ಪಿ.ಜಿ ಗ್ಯಾಸ್, ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್, ರಾಸಾಯನಿಕ ಅನಿಲದಿಂದ ಅಪಾಯ, ಮನೆಗೆ ಬೀಳುವ ಬೆಂಕಿಯಿಂದ ಜನರನ್ನು ರಕ್ಷಿಸುವ ಹಾಗೂ ಸಂಭವನೀಯ ಅಪಾದಿಂದ ಪಾರಾಗುವ ವಿಧವನ್ನು ವೇದಿಕೆಯಲ್ಲಿ ಪ್ರಾಯೋಗಿಕವಾಗಿ ಪ್ರದರ್ಶಿಸಿದರು.

ಕುಮಟಾ ಪಿ.ಎಸ್.ಐ ನವೀನ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಮಾಡುವ ತಪ್ಪು, ಪೋಕ್ಸೋ ಕಾಯಿದೆ, ಸಾಮಾಜಿಕ ಜಾಲತಾಣದ ಅಪಾಯ, ಬ್ಯಾಂಕ್ ಖಾತೆಗಳ ಹ್ಯಾಕ್ ಆಗುವಿಕೆ, ಗಾಂಜಾ, ಅಫೀಮ್, ಸಿಗರೇಟ್, ಕೊಕ್ಕಿನ್ ಇತ್ಯಾದಿ ಮಾದಕ ಪದಾರ್ಥಗಳಿಂದ ಉಂಟಾಗುವ ಅಪಾಯ, ಕಾನೂನು ಕ್ರಮ ಇತ್ಯಾದಿಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. 

RELATED ARTICLES  ಜಿ.ಎಸ್.ಬಿ ಸೇವಾ ಟ್ರಸ್ಟ್ ನಿಂದ ಶಿಷ್ಯವೇತನ, ಗೌರವಧನ, ಲೇಖನ ಸಾಮಗ್ರಿ ವಿತರಣೆ.

ಇತ್ತೀಚಿಗೆ ಸಾಮಾಜಿಕ ಜಾಲ ತಾಣ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ಅಪಾಯಕರವಾಗಿದೆ. ವಾಟ್ಸಾಫ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಉಪಯೋಗಿಸುವಾಗ. ಸ್ಟೇಟಸ್ ಹಾಕಿಕೊಳ್ಳುವವರು ಹೇಗೆಲ್ಲ ಅಪಾಯಕ್ಕೆ ಸಿಲುಕುತ್ತಾರೆ ಎಂಬ ಬಗ್ಗೆ ಉದಾಹರಣೆ ಸಹಿತ ತಿಳಿಸಿದರು. ವಿದ್ಯಾರ್ಥಿಗಳು ಜಾಲತಾಣ ಬಳಸುವಾಗಿನ ಮೊನ್ನೆಚ್ಚರಿಕೆಯ ಬಗ್ಗೆ ತಿಳಿ ಹೇಳಿದರು.

ಕಿಡ್ನೀಸ್ ಸಂಸ್ಥೆಯ ವಿದೂಷಿ ಪಾಂಡಯೆ ಮಾತನಾಡಿ ವಿದ್ಯಾರ್ಥಿಗಳು ಹೇಗೆ ಸ್ಥಿರ ಮನಸ್ಥಿತಿ ಹೊಂದಿರಬೇಕು. ಮಾನಸಿಕ ವಿಚಲನೆಗೆ ಒಳಗಾಗಬಾರದು. ಯೋಗ ಚಟುವಟಿಕೆ ನಡೆಸಬೇಕು. ಆರೋಗ್ಯ ಸಮಸ್ಯೆ ಉಂಟಾದರೆ ಏನುಮಾಡಬೇಕು. ವೈದ್ಯರ ಸಂಪರ್ಕ ಹೇಗೆ ಮಾಡುವದು. ಇತ್ಯಾದಿ ತಿಳಿಸಿ ಜೀವನದ ಮಾನಸಿಕ ದುರ್ಬಲತೆಯ ಅಪಾವನ್ನು ವಿದ್ಯಾರ್ಥಿಗಳು ಎದುರಿಸುವ ಪರಿ ತಿಳಿಸಿದರು. ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಂಪರ್ಕಿಸಿ ಪ್ರಯೋಜನ ಪಡೆಯಬಹುದು ಎಂದರು.

RELATED ARTICLES  ತರಂಗ ಇಲೆಕ್ಟ್ರಾನಿಕ್ಸ್ ನಲ್ಲಿ ಫರ್ನಿಚರ್ ಮೇಳ ಪ್ರಾರಂಭ

ಕಲಾ ವಿಜ್ಞಾನ ವಿದ್ಯಾಲಯದ ಪ್ರಾಚಾರ್ಯ ವೀಣಾ ಕಾಮತ ಮಾತನಾಡಿ ಕಾರ್ಯಕ್ರಮ ಪ್ರಯೋಜನ ಪಡೆಯಲು ತಿಳಿಸಿದರು. ವಾಣಿಜ್ಯ ಪ್ರಾಚಾರ್ಯ ಪ್ರೊ. ಎನ್. ಜಿ. ಹೆಗಡೆ ಸ್ವಾಗತಿಸಿದರು. ಶಿಲ್ಪಾ ಡಿಸೋಜ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೀಶಾ ಆಚಾರ್ಯ ಮತ್ತು ದೀಪಿಕಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.