ಕುಮಟಾ : ಭೌತಿಕ ಸಂಪತ್ತಿನ ಶ್ರೀಮಂತಿಕೆಯೆಡೆಗೆ ಅತಿಯಾಗಿ ಯೋಚಿಸುತ್ತಿರುವ ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳ ಅಂತಃ ಸತ್ವವನ್ನು ಹೆಚ್ಚಿಸುತ್ತಾ ಶಿಕ್ಷಣದ ಮೂಲಕ ಎದೆ ತುಂಬುವ ಕೆಲಸ ಮಾಡುತ್ತಿರುವ ಹಿರೇಗುತ್ತಿ ಪದವಿಪೂರ್ವ ಕಾಲೇಜು ಅಂತಃ ಸಂಪತ್ತಿನಿಂದ ಶ್ರೀಮಂತವಾಗಿದೆ ಎಂದು ೨೦೨೩-೨೪ ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮವನ್ನು ಉದ್ಘಾಟಿಸಿದ ಜಿ. ಪಂ. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಜಾವಲಿನ್ ಎಸೆತಗಾರ ಶೇಖರ ಗೌಡ ಮತ್ತು ವಿಭಾಗ ಮಟ್ಟದ ಕನ್ನಡ ಚರ್ಚಾಸ್ಪರ್ಧೆಗೆ ಆಯ್ಕೆಯಾದ ಶ್ರೀನಿಧಿ ನಾಯ್ಕ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಜನ ಮೆಚ್ಚುಗೆ ಪಡೆದುಕೊಂಡಿದೆ ವಿದ್ಯಾರ್ಥಿಗಳು ಬೆಳೆಯುವುದರ ಮೂಲಕ ಕಾಲೇಜಿನನ್ನು ಬೆಳೆಸಬೇಕೆಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾಗಿ ಜಿ.ಐ ಹೆಗಡೆ ಆಯ್ಕೆ.

ಕಾಲೇಜಿನ ಆದರ್ಶ ವಿದ್ಯಾರ್ಥಿ ಗೌರವಕ್ಕೆ ಭಾಜನರಾದ ದತ್ತಾತ್ರೇಯ ಹಳ್ಳೇರ ಹಾಗೂ ಸುಶ್ಮಿತಾ ನಾಯ್ಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಧಾನ ಉಪನ್ಯಾಸ ನೀಡಿದ ಕಾಗಾಲ ಚಿದಾನಂದ ಭಂಡಾರಿ ರಾಷ್ಟ್ರಾಭಿಮಾನ, ಭಾಷಾಭಿಮಾನ, ಮತ್ತು ಆತ್ಮವಿಶ್ವಾಸಗಳನ್ನು ಜಾಗೃತಗೊಳಿಸುವ ದೃಷ್ಟಾಂತಗಳನ್ನು ನೀಡುತ್ತಾ ಸ್ಫೂರ್ತಿಯುತವಾದ ದಿಕ್ಸೂಚಿ ನುಡಿಗಳನ್ನಾಡಿದರು. 

ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿಯವರು ಕೌಶಲ್ಯಾಧಾರಿತ ಶಿಕ್ಷಣದೆಡೆಗೆ ತೆರೆದುಕೊಳ್ಳುವ ಅಗತ್ಯತೆಯನ್ನು, ವಾಸ್ತವಾಂಶಗಳನ್ನು ಉದಾಹರಿಸುತ್ತಾ ಮನಮುಟ್ಟುವಂತೆ ಮಾತನಾಡಿದರು. 

ನಿವೃತ್ತ ಪ್ರಚಾರ್ಯ ಅರುಣ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಗುರಿ ಮುಖ್ಯ ಆ ಗುರಿಯ ಸಫಲತೆಯಲ್ಲಿ ವಿದ್ಯಾರ್ಥಿಗಳು ಕಾಯಾ-ವಾಚಾ-ಮನಸ್ಸಾ ತೊಡಗಿಸಕೊಳ್ಳಬೇಕು ಎಂದರು.

ಆಶ್ರಯ ಫೌಂಡೇಶನ್ ಅಧ್ಯಕ್ಷ ರಾಜೀವ ಗಾಂವಕರ್ ಕಾಲೇಜಿನ ಸಮಗ್ರ ಕರ‍್ಯಚಟುವಟಿಕೆಗಳನ್ನು ಮುಕ್ತವಾಗಿ ಶ್ಲಾಘಿಸಿ ಸ್ಪೂರ್ತಿ ನೀಡಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎನ್.ಟಿ.ನಾಯಕ ವಿದ್ಯಾರ್ಥಿಗಳ ಶಿಸ್ತು, ಸಂಯಮದ ನಡುವಳಿಕೆಗಳನ್ನು ಮೆಚ್ಚಿ ಮಾತನಾಡಿದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪುರಸ್ಕಾರಗಳ ವಿತರಣೆಯನ್ನು ಗಣಿತಶಾಸ್ತ್ರದ ಉಪನ್ಯಾಸಕಿ ಸುಜಾತಾ ನಾಯಕ ನಿರ್ವಹಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರ ಬಹುಮಾನ ವಿತರಣೆಯನ್ನು ಜೀವಶಾಸ್ತ್ರ ಉಪನ್ಯಾಸಕಿ ನೇತ್ರಾವತಿ ನಾಯಕ ನಿರ್ವಹಿಸಿದರು. ಕ್ರೀಡಾ ಚಟುವಟಿಕೆಗಳ ಬಹುಮಾನ ವಿತರಣೆಯನ್ನು ಭೌತಶಾಸ್ತ್ರ ಉಪನ್ಯಾಸಕಿ  ವಿನಯಾ ಗೌಡ ನಿರ್ವಹಿಸಿದರು. 

RELATED ARTICLES  ಯಕ್ಷೋತ್ಸವ ೨೦೨೩ ಸಂಪನ್ನ - ಅಭಿನೇತ್ರಿ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚುಗೆ.

ಕಾಲೇಜಿನ ಪ್ರಭಾರಿ ಪ್ರಾಚಾರ್ಯ ನಾಗರಾಜ ಗಾಂವಕರ ಸಭಾಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಪುರಸ್ಕಾರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿ ಮಾತನಾಡಿದರು. ವಿಜಯಲಕ್ಷ್ಮೀ ನಾಯಕ ವರದಿ ವಾಚಿಸಿದರು. ಶಾರದಾ ನಾಯಕ ಸ್ವಾಗತಿಸಿದರು. ಸೀಮಾ ಪಟಗಾರ ವಂದಿಸಿದರು. ರಮೇಶ ಗೌಡ ಕಾರ‍್ಯಕ್ರಮವನ್ನು ನಿರ್ವಹಿಸಿದರು.