ಕುಮಟಾ : ಸಮಾಜಮುಖಿ ಕಾರ್ಯದ‌ ಮೂಲಕ ಗುರುತಿಸಿಕೊಂಡಿರುವ ಗ್ರಾಮ ಒಕ್ಕಲು ಯುವ ಬಳಗದವರು ತೋಟದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮರದಿಂದ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗದ್ದೆಮನೆಯ ನಿವಾಸಿ ಮಾಬ್ಲ ಗೋವಿಂದ ಗೌಡ ಇವರಿಗೆ ಸಾಂತ್ವಾನ ಹೇಳಿ, ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

RELATED ARTICLES  ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆ

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು. ಅಸಹಾಯಕರಿಗೆ ಪರಿಹಾರ ನಿಧಿಯನ್ನು ನೀಡಿದ ಯುವ ಬಳಗದವರಿಗೆ ಮಾಬ್ಲ ಗೌಡ ಕುಟುಂಬದವರು ಧನ್ಯವಾದ ಸಲ್ಲಿಸಿದ್ದಾರೆ.

RELATED ARTICLES  ಮೇ ೧೯ - ಸಾರಸ್ವತ ಕೊಂಕಣಿ ಪುರಸ್ಕಾರಗಳ ಪ್ರದಾನ