ಕುಮಟಾ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆದ 26 ನೇ ಚುಂಚಾದ್ರಿ ರಾಜ್ಯಮಟ್ಟದ ಕ್ರೀಡೋತ್ಸವದ 200 ಮೀ. ಓಟದ ಸ್ಪರ್ಧೆಯಲ್ಲಿ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿ ಎನ್. ಸನ್ಮಿತ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ.
ಎನ್. ಸನ್ಮಿತ್ ಕುಮಟಾ ತಾಲೂಕಿನ ಮಾದನಗೇರಿಯ ನೀಲಾಧರ ಸಿ. ಹೆಚ್. ಮತ್ತು ಸಂಗೀತಾ ಎನ್. ಹೆಚ್ ರವರ ಪುತ್ರನಾಗಿದ್ದು ಉದಯೋನ್ಮುಖ ಕ್ರೀಡಾಪಟುವಾಗಿದ್ದಾನೆ.
ವಿಜೇತ ವಿದ್ಯಾರ್ಥಿಯನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಬ್ರಹ್ಮಚಾರಿ ನಿಶ್ಚಲಾನಂದನಾಥ ಸ್ವಾಮೀಜಿಯವರು ಆಶೀರ್ವದಿಸಿದ್ದಾರೆ ಹಾಗೂ ಪ್ರಾಂಶುಪಾಲೆ ಲೀನಾ ಎಂ. ಗೊನೇಹಳ್ಳಿ, ಆಡಳಿತಾಧಿಕಾರಿ ಜಿ. ಮಂಜುನಾಥ ಹಾಗೂ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಯ ಸಾಧನೆಗೆ ಅಭಿನಂದಿಸಿದ್ದಾರೆ.