ದಾಂಡೇಲಿ : ತನ್ನ ತಂದೆಯ ಜೊತೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ತಂದೆ ಮತ್ತು ಮಗಳಿಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರೂ ಗಂಭೀರ ಗಾಯಗೊಂಡಿದ್ದ ಘಟನೆ ತಾಲೂಕಿನ ಬರ್ಚಿ ರಸ್ತೆಯ ಸೇತುವೆ ಪಕ್ಕದಲ್ಲಿರುವ ರಾಮನಗರ ಮಿರ್ಜಾನ ರಾಜ್ಯ ಹೆದ್ದಾರಿಯ ಸಮೀಪದ ಕಾಲುದಾರಿಯ ಮೇಲೆ ಬರ್ಚಿ ಸೇತುವೆಯ ಹತ್ತಿರ ನಡೆದಿತ್ತು.

ಗಾಯಗೊಂಡ ಇಬ್ಬರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಅರಣ್ಯ ಇಲಾಖೆಯಲ್ಲಿ ಉಪ ವಲಯರಣ್ಯಾಧಿಕಾರಿ ಶ್ರೀಶೈಲ್‌ ಸಿದ್ದಪ್ಪ ದೇವರಮನಿ ಅವರು ತನ್ನ ಮಗಳಾದ ಒಂಬತ್ತು ವರ್ಷ ವಯಸ್ಸಿನ ಐಶ್ವರ್ಯಳ ಜೊತೆ ಕಾಲು ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಹಿಂದುಗಡೆಯಿಂದ ಅತಿಯಾದ ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ, ಶ್ರೀಶೈಲ್ ದೇವರಮನಿ ಹಾಗೂ ಐಶ್ವರ್ಯ ಇಬ್ಬರಿಗೂ ಡಿಕ್ಕಿ ಹೊಡೆದಿದೆ.

RELATED ARTICLES  ಅಕ್ರಮವಾಗಿ ಗೋವಾ ಸಾರಾಯಿ ಸಾಗಾಟ : ಓರ್ವ ಅರೆಸ್ಟ್..!

ಈ ಸಂದರ್ಭದಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದ್ದು ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿಕೊಡಲಾಗಿತ್ತು. ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರಲ್ಲಿ ಐಶ್ವರ್ಯ ದೇವರಮನಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾಳೆ.

RELATED ARTICLES  ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಸಾವು.