ಶಿರಸಿ: ತಾಲೂಕಿನ ಗ್ರಾಮಾಂತರ ಭಾಗವಾದ ಕೊಳಗಿಬೀಸ್ ನಲ್ಲಿ ಕಾರಿನ ಬಿಡಿಭಾಗಗಳ ಸಾಮಗ್ರಿಗಳನ್ನು ತಯಾರಿಸುವ ಪ್ಯಾಕ್ಟರಿಗೆ ಬೆಂಕಿ ಬಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮಶಿಗದ್ದೆಯ ರಾಘವ ವಿಶ್ವೇಶ್ವರ ಹೆಗಡೆ ಎಂಬುವವರ ಮಾಲೀಕತ್ವದ ಮಾನ್ಯ ಇಂಡಸ್ಟ್ರೀಸ್ ಎಂಬ ಹೆಸರಿನ ವಾಹನ ಬಿಡಿ ಭಾಗ ತಯಾರಿಕಾ ಕಾರ್ಖಾನೆ ಇದಾಗಿದ್ದು ಕಾರಿನ ಡ್ಯಾಷ್ ಬೋರ್ಡ್ ಮತ್ತಿತರ ವಸ್ತುಗಳನ್ನು ತಯಾಸುವ ಪೈಬರ್ ಫ್ಯಾಕ್ಟರಿ ಇದಾಗಿದೆ. ಬೆಂಕಿ ಕೆನ್ನಾಲಿಗೆಗೆ ಕಾರ್ಖಾನೆಯ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜುರಾಗಿ ಬೆಂಕಿ ನಂದಿಸುತಿದ್ದಾರೆ.ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.