ಕಾರವಾರ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ ದೇವಳಮಕ್ಕಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ.ಶಾಲೆ ನಗೆ, ಗ್ರಾಮ ಅರಣ್ಯ ಸಮಿತಿ ನಗೆ-ಕೋವೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ 50ರ ಗಾಳಿಪಟ ಹಾರಾಟ ಸ್ಪರ್ಧೆ ಹಾಗೂ ತಿಂಡಿ ತಿನಿಸುಗಳ ಸ್ಪರ್ಧೆ ಉದ್ಘಾಟನೆ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಡಿ.19ರ ಬೆಳಗ್ಗೆ 10 ಗಂಟೆಗೆ ತಾಲೂಕಿನ ನಗೆ ಗ್ರಾಮದ ಮುರುಗಲ ಹೊಂಡ, ಉದ್ಭವಲಿಂಗ ದೇವಸ್ಥಾನದ ಹತ್ತಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಕೆ. ಸೈಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ.ಸಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ದೇವಳಮಕ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಲೇಖಾ ಗೌಡ, ವೈಲವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೇಘಾ ಮನೋಹರ ಗಾಂವಕರ, ಕೆರವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಚಂದ್ರ ಯಶ್ವಂತ ನಾಯ್ಕ, ಉದ್ಭವಲಿಂಗ ದೇವಸ್ಥಾನದ ಮುಖ್ಯಸ್ಥ ಮಾದೇವ ರಾಮ ಗಾಂವಕರ ಮತ್ತಿತರು ಪಾಲ್ಗೊಳಲಿದ್ದಾರೆ.