ಕುಮಟಾ : ಮನೆಯಲ್ಲಿದ್ದ ಅಡುಗೆ ಸಿಲೆಂಡರ್ ಸ್ಪೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಹೆಗಡೆ ಗ್ರಾಮದಲ್ಲಿ ನಡೆದಿದೆ. ಹೆಗಡೆಯ ಗುನಗನಕೊಪ್ಪದ ನಾರಾಯಣ ಮುಕ್ರಿ ಅವರ‌ ಮನೆಯಲ್ಲಿ ಈ ಅಗ್ನಿ ಅವಘಡ ಸಂಬಂಧಿಸಿದ್ದು, ಸಿಲೆಂಡರ್ ಸೋರಿಕೆಯಿಂದಾಗಿ ಮನೆಯಲ್ಲಿದ್ದ ಎರಡು ಸಿಲೆಂಡರ್ ಸ್ಪೋಟಗೊಂಡಿದೆ. ಇವರದ್ದು ಹಂಚಿನ ಮನೆಯಾಗಿದ್ದ ಕಾರಣ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಯಾಗಿದೆ.

RELATED ARTICLES  ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ

ಬೆಂಕಿ ತಗುಲಿರುವುದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಮನೆಯ ಯಜಮಾನನಾದಿಯಾಗಿ ಮನೆ‌ಮಂದಿ ಕೂಲಿ ಕೆಲಸಕ್ಕೆ ತೆರಳಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮನೆಯಲ್ಲಿದ್ದ‌ ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟುಕರಲಾಗಿದ್ದು, ಈ ಘಟನೆಯಿಂದಾಗಿ ನಾರಾಯಣ ಮುಕ್ರಿ ಅವರ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ.

RELATED ARTICLES  ಡಿ. ೨೪ ಕ್ಕೆ ಪಂ.ಷಡಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ.