ಹೊನ್ನಾವರ : ರಾತ್ರಿಯ ಸಮಯದಲ್ಲಿ ಮರಳುಸಾಗಾಟ ಮಾಡುತಿದ್ದ ಟಿಪ್ಪರ್ ಹರಿದು ವಿದ್ಯಾರ್ಥಿ ಸಾವುಕಂಡ ಘಟನೆ ತಾಲೂಕಿನ ಕರಿಕುರ್ವಾದಲ್ಲಿ ತಡರಾತ್ರಿ ನಡೆದಿದೆ. ಮಾವಿನ ಕುರ್ವಾದ ದರ್ಶನ ಗೌಡ ಮೃತ ಯುವಕನಾಗಿದ್ದು ಈತ ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿರುವವನಾಗಿದ್ದ.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆಯಲ್ಲಿ ಸಾಧನೆ.

ನಿನ್ನೆ ತಡರಾತ್ರಿ ಕರಿಕುರ್ವದ ಶರಾವತಿ ನದಿ ಭಾಗದ ಮರಳು ದಿಬ್ಬದ ಬಳಿ ಮಲಗಿದ್ದಾಗ ಲೋಡ್ ಆದ ಮಾವಿನ ಕುರ್ವದ ಟಿಪ್ಪರ್ ಲಾರಿ ಹರಿದು ಈತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಇಡೇರುತ್ತಿದೆ ಬಹುದಿನದ ಕನಸು : ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ