ಭಟ್ಕಳ: ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯೋರ್ವಳು ಮನನೊಂದು ಮನೆಯ ಪಕ್ಕದ ಗೇರು ಮರದ ಕೆಳಗೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ತಲಾಂದನಲ್ಲಿ ನಡೆದಿದೆ

ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ಈರಮ್ಮಾ ಮಾದೇವ ನಾಯ್ಕ ಎಂದು ತಿಳಿದು ಬಂದಿದೆ. ಈಕೆ ಕಳೆದ 3-4 ವರ್ಷದಿಂದ ತನಗಾದ ಕಾಲುನೋವಿಗೆ ಉಡುಪಿಯ ಉದ್ವಾವರ ಆಯುರ್ವೇದಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಅವಳ ಕಾಲುನೋವು ವಾಸಿಯಾಗದೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯ ಪಕ್ಕದ ಗೇರು ಮರದ ಕೆಳಗೆ ಹೋಗಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಕಿಗೆ ಮೃತ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯೆಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕೊಡುಗೈ ದಾನಿ ದಿವಗಂತ ಬಿ ಕೆ ಭಂಡಾರಕರ ಸಂಸ್ಮರಣಾ ಕಾರ್ಯಕ್ರಮ.