ಮಾನವ ಜನ್ಮ ದುರ್ಲಭವಾದುದು. ಪೂರ್ವಾರ್ಜಿತ ಪುಣ್ಯ ಸಂಚಯದಿಂದ ಮಾತ್ರ ಮಾನವ ಜನ್ಮ ಲಭಿಸುವುದು. ಆದುದರಿಂದ ಮಾನವನು ತನ್ನ ಕರ್ತವ್ಯಗಳನ್ನು ಸಮರ್ಥರೀತಿಯಲ್ಲಿ ಪಾಲಿಸಬೇಕು. ಸಮರ್ಪಣಾ ಭಾವನೆಯಿಂದ ನಿರ್ವಹಿಸಬೇಕು. ದೇಹವಿರುವವರೆಗೂ ಕರ್ತವ್ಯದ ಹೊಣೆ ಇದ್ದೇ ಇರುವುದು. ಇoತಹ ಹತ್ತು ಹಲವು ಸoದೇಶಗಳ ಜೊತೆಗೆ ಆದಿಶಂಕರರ ಅವಿಚ್ಛಿನ್ನ ಪರಂಪರೆಯಾದ ಶ್ರೀರಾಮಚಂದ್ರಾಪುರಮಠದ 35 ಪೀಠಾಧಿಪತಿಗಳಾಗಿದ್ದ ಶ್ರೀಶ್ರೀ ರಾಘವೇಂದ್ರಭಾರತೀ ಸ್ವಾಮಿಗಳ ಜೀವನದ ಕಿರುಚಿತ್ರಣ ನೀಡುವ ಅಮೂಲ್ಯ ಕೃತಿಯೇ ದಿವ್ಯ ಜೀವನ.

RELATED ARTICLES  ಟಿಟಿಡಿ ಟ್ರಸ್ಟ್ ಸಮಾಜದ ಇತರ ಸಂಸ್ಥೆಗಳಿಗೂ ಮಾದರಿ: ರಾಘವೇಶ್ವರ ಶ್ರೀ

ಸೊರಬದ ಕೆರೆಕೊಪ್ಪದ ಸೋಮಶೇಖರ್ ಕಾಶೈನ್ ಅವರ ಮನೆಯಲ್ಲಿ ನಡೆದ ಶ್ರೀರಾಮಚoದ್ರಾಪುರಮಠದ
35ನೇ ಪೀಠಾಧಿಪತಿಗಳಾಗಿದ್ದ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಅವರ ಆರಾಧನಾ ಮಹೋತ್ಸವದ ದಿನದoದು(ಡಿಸೆoಬರ್ 20) ಅವರ ಜೀವನದ ಕುರಿತು ಸoಕ್ಷಿಪ್ತವಾಗಿ ಪರಿಚಯಿಸುವ ದಿವ್ಯ ಜೀವನ ಪುಸ್ತಕವನ್ನು ಶ್ರೀಸoಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಅವರು ಲೋಕಾರ್ಪಣೆಗೊಳಿಸಿದರು.

ಭಗವದ್ಗೀತೆ, ಭೀಷ್ಮ, ವಿದುರ, ದಶಕಂಠ ರಾವಣ, ಚಾಣಕ್ಯ, ಧರ್ಮ ಮುoತಾದ 25 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಪ್ರಸಿದ್ಧ ಲೇಖಕರಾದ ವಿದ್ವಾನ್ ಜಗದೀಶಶರ್ಮಾ ಸoಪ ಅವರ ಮೊದಲ ಕೃತಿಯ ಮರುಮುದ್ರಣವಿದು. ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಿ.

RELATED ARTICLES  ರಾಘವೇಶ್ವರ ಶ್ರೀಗಳ ಆಗಮನದ ಸವಿ ನಿರೀಕ್ಷೆಯಲ್ಲಿರುವ ಅಖಿಲ ಹವ್ಯಕ ಮಹಾಸಭೆ!

“ನಮ್ಮ ಪರಮಪೂಜ್ಯ ಗುರುವರ್ಯರು (ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳು) ಯತಿನಿವಹದಲ್ಲಿ ಗೌರವಾರ್ಹರು. ಶ್ರೀಪೀಠವನ್ನು ಪರಂಪರೆಯ ಮೌಲ್ಯದಂತೆ ಮುನ್ನೆಡೆಸಿದವರು. ಅಧ್ಯಯನ- ಅನುಭವಗಳಿಂದ ಪರಿಪೂರ್ಣರು. ತಪೋನಿಷ್ಠಾನ ನಿರತರು, ಶಿಷ್ಯವತ್ಸಲರು.”

  • ಶ್ರೀ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ