ಕಾರವಾರ : ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರ ಮೇಲೆ ಲಾರಿ ಹಾಯ್ದು ಮುಖ್ಯ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ. ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಶಾಲೆಯ ಹೆಡ್ಮಾಸ್ಟರ್ ಸಾವಿಗೀಡಾದ ದುರ್ದೈವಿ.

RELATED ARTICLES  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

ಮೃತ ಶಿಕ್ಷಕ ಉಮೇಶ ಗುನಗಿ ಕಿನ್ನರದ ನಿವಾಸಿಯಾಗಿರುವ. ಉಮೇಶ ಗುನಗಿ (50) ಮೃತಪಟ್ಟಿರುವ ಮುಖ್ಯ ಶಿಕ್ಷಕರಾಗಿದ್ದಾರೆ. ಇವರು ಇಂದು ಬೆಳಿಗ್ಗೆ ತಂದೆಯವರನ್ನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆ ದಾಖಲಿಸಿ ಬಳಿಕ ದೇವಳಮಕ್ಕಿ ಶಾಲೆಗೆ ತೆರಳುತ್ತಿದ್ದರು. ಅಪಘಾತವಾಗಿದ್ದು, ಲಾರಿ ಶಿಕ್ಷಕನ ಮೇಲೆ ಹಾದು ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

RELATED ARTICLES  ಭಾರತ ಟಿ20 ವಿಶ್ವ ಕಪ್ ಗೆದ್ದ ರೀತಿಯಲ್ಲಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಜನರ ಮನಸ್ಸಿನ ಕಪ್ ಗೆಲ್ಲುತ್ತೇವೆ : ಎಸ್.ಪಿ

ಅವೈಜ್ಞಾನಿಕವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.