ಕುಮಟಾ : ಪಂ. ಷಡಕ್ಷರಿ ಗವಾಯಿ ಅಕಾಡೆಮಿ, ಕೂಜಳ್ಳಿ ಕುಮಟಾ ಇವರು ಖ್ಯಾತ ಸಂಗೀತ ಗುರುಗಳಾದ ಪಂ. ಷಡಕ್ಷರಿ ಗವಾಯಿ ಅವರ ನೆನಪಿನಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಡಿ.24 ರವಿವಾರ ಬೆಳಿಗ್ಗೆ 9:30 ರಿಂದ ಕೂಜಳ್ಳಿಯ ಕುಳಿಹಕ್ಕಲ್ ನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ  ಹಮ್ಮಿಕೊಂಡಿರುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಸ್ವರ ಸಂಗಮ ಕೂಜಳ್ಳಿಯ ಅಧ್ಯಕ್ಷ ಎಸ್. ಜಿ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗವಾಯಿ ಅಕಾಡೆಮಿಯ ಖಜಾಂಚಿ ಎಸ್.ಎನ್ ಭಟ್ಟ, ಪ್ರೊ. ಆನಂದ ನಾಯ್ಕ ಚಂದಾವರ ಇರುವರು. ಸ್ವರ ನಮನ ಕಾರ್ಯಕ್ರಮದಲ್ಲಿ ಪಂ.ವಿಶ್ವನಾಥ ಕಾನ್ಹರೆ, ಮುಂಬೈ (ಹಾರ್ಮೋನಿಯಂ ಸೋಲೋ) ಪಂ.ರಘುಪತಿ ಹೆಗಡೆ,ಶೀಗೆಹಳ್ಳಿ (ಗಾಯನ) ವಿದೂಷಿ ಶಾರದಾ ಭಟ್, ಮೈಸೂರು (ಗಾಯನ) ವಿದೂಷಿ ಶಿವಾನಿ ಕಲ್ಯಾಣಪುರ, ವಿಶಾಖಪಟ್ಟಣ (ಗಾಯನ) ವಿದೂಷಿ ನಿವೇದಿತಾ ಹಟ್ಟಂಗಡಿ, ಮುಂಬೈ (ಗಾಯನ) ಶ್ರೀಮತಿ ತೇಜಾ ಭಟ್ಟ ಕವಲಕ್ಕಿ & ಕು.ಸ್ವಾತಂತ್ರ್ಯಾ ಎ ಎನ್. ಚಂದಾವರ (ಗಾಯನ ಜುಗಲ್‌ಬಂಧಿ) ಕು. ರಿಷಾ ನಾಯಕ ಮತ್ತು ಕು. ಅದಿತಿ ಶಾನಭಾಗ & ಕು. ಮಾಧವ ಭಟ್ಟ (ಗಾಯನ ತಿಗಲ್ಬಂದಿ) ಭಾಗವಹಿಸಲಿದ್ದಾರೆ.

RELATED ARTICLES  ಎಂ. ಕೆ. ಹೆಗಡೆಯವರಿಗೆ 'ಸೌರಭ' ಸಂಸ್ಥೆಯಿಂದ ಶ್ರದ್ಧಾಂಜಲಿ.

ಸ್ವರ ನಮನದ ತಬಲಾದಲ್ಲಿ ಪ್ರೋ. ಎನ್. ಜಿ ಅನಂತಮೂರ್ತಿ ಗುಣವಂತೆ, ಶಂತನು ಶುಕ್ಲ ಮುಂಬೈ, ವಿದ್ವಾನ್ ಸಂತೋಷ ಚಂದಾವರ, ಅಕ್ಷಯ ಭಟ್ಟ ಅಂಸಳ್ಳಿ, ಭರತ್ ಹೆಗಡೆ ಕವಲಕ್ಕಿ, ಕು. ದೀಪಕ ಭಟ್ಟ, ಕೂಜಳ್ಳಿ ಸಹಕಾರ ನೀಡಲಿದ್ದಾರೆ. ಸಂವಾದಿನಿಯಲ್ಲಿ ಗೌರೀಶ ಯಾಜಿ, ಕು. ಆಜಯ ಹೆಗಡೆ ವರ್ಗಾಸರ, ಸಿಂಚನಾ ಭಟ್ಟ ಇರುವರು.

ಇದೇ ದಿನ ಸಂಜೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತ ರಾವ್ ವಹಿಸಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಿ. ಎಂ ನಾಯ್ಕ ಮಿರ್ಜಾನ್, ವಿಜ್ಞಾನಿ ಡಾ. ಶ್ರೀಕಾಂತ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ,  ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಇರುವರು.

RELATED ARTICLES  ಕಣ್ಣು ಮತ್ತು ದೇಹ ದಾನ ಮಾಡಿ ಅಮರರಾದ ಮಾತೋಶ್ರೀ ರುಕ್ಮಾಬಾಯಿ ಪ್ರಭು

ಕಾರ್ಯಕ್ರಮದಲ್ಲಿ ಹೆಚ್ಚಿನ ಕಲಾಸಕ್ತರು ಹಾಗೂ ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಈ ವರ್ಷದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಂ. ವಿಶ್ವನಾಥ ಕಾನ್ಹರೆ ಭಾಜನರಾಗುತ್ತಿದ್ದು ಸಂವಾದಿನಿ ಸಾತ್ ನಲ್ಲಿ ಇವರು ಅಗಾಧ ಜ್ಞಾನ ಹೊಂದಿರುವವರು. ರಷ್ಯಾ, ಯುಎಸ್ಎ, ಬ್ರೆಜಿಲ್, ಜರ್ಮನಿ ಹಾಗೂ ಹಲವು ದೇಶದಲ್ಲಿ ಕಲಾವಿದರಿಗೆ ಸಾತ್ ನೀಡಿದ್ದಾರೆ. ಸಂವಾದಿನಿಯಲ್ಲಿ ಭಾರತದ ಶ್ರೇಷ್ಠ ಗಾಯಕರಗಳಾದ ಭೀಮ್ಸೇನ್ ಜೋಶಿ, ಕುಮಾರ ಗಂಧರ್ವ, ಪಂಡಿತ್ ಜಸ್ರಾಜ್, ಪಂಡಿತ್ ಜಿತೇಂದ್ರ ಅಭಿಷೇಕಿ ಇನ್ನಿತರರಿಗೆ ಸಾತ್ ನೀಡಿ ಮೆಚ್ಚುಗೆ  ಪಡೆದವರಾಗಿದ್ದಾರೆ