ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಾಹಾ ಮಂಡಳದ ವಲಯ ಪ್ರವಾಸ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಕಾಯರ್ ಕಟ್ಟೆ.ಯಲ್ಲಿ ಕಾರ್ಯಕ್ರಮ ನಡೆಯಿತು.

ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಾಪು ವಲಯ ಪ್ರವಾಸದ ಉದ್ದೇಶ ಯೋಜನೆಗಳ ಬಗ್ಗೆ ಪ್ರಸ್ತಾವನೆ ಮಾಡಿದರು. ಬಳಿಕ ಪ್ರತೀ ವಿಭಾಗಗಳ ಕುರಿತು ಸಮಗ್ರ ಮಾಹಿತಿ ವಿನಿಮಯ ನಡೆದು ಯೋಜನೆಗಳನ್ನು ಕಾರ್ಯಗತಗೊಳಿಸುವ ಕುರಿತು ಸಲಹೆ ಸೂಚನೆಗಳನ್ನಿತ್ತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು.

RELATED ARTICLES  ಕಾಂಚಿ ಕಾಮಕೋಟಿಗೆ ಭೇಟಿ ನೀಡಿದ ಶ್ರೀ ಸಂಸ್ಥಾನ.

ಮಹಾ ಮಂಡಲದ ಮಾತೃ ಪ್ರಧಾನೆ ಕಲ್ಪನಾ ತಲವಾಟ, ಮುಷ್ಥಿ ಭಿಕ್ಷಾ ಪ್ರಧಾನೆ ಮಲ್ಲಿಕಾ ಜಿ. ಯಸ್, ಉಲ್ಲೇಖ ಪ್ರಧಾನ ಗೋವಿಂದ ಭಟ್ಟ ಬಳ್ಳಮೂಲೆ ಇವರು ಆಯಾ ವಿಭಾಗದ ಕಾರ್ಯಚಟುವಟಿಕೆಗಳ ವಿಧಾನಗಳ ಸಾಮಾಲೋಚನೆ ಮಾಡಿ ಮಾಹಿತಿ, ಸಲಹೆ ಸೂಚನೆಗಳನ್ನು ನೀಡಿದರು.
IMG 20171013 WA0010

ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್, ಉದಯಕುಮಾರ್ ಖಂಡಿಗೆ ಮಂಡಲ ಗುರಿಕ್ಕಾರರು, ಗಣೇಶ್ ಕುಮಾರ್ ಕಾಶೀಮಠ ಉಪಾಧ್ಯಕ್ಷರು, ಉದಯಶಂಕರ ನೀರ್ಪಾಜೆ ಮಂಡಲ ಶಿಷ್ಯಮಾಧ್ಯಮ ಪ್ರಧಾನರು, ಶ್ರೀಕೃಷ್ಣ ಹಳೆ ಮನೆ ಉಲ್ಲೇಖ ಪ್ರಧಾನರು,ಮುಳ್ಳುಂಜ ವೆಂಕಟೇಶ್ವರ ಭಟ್ಟ ಮೂಲ ಮಠ ಅಶೋಕೆ ಪ್ರತಿನಿಧಿಗಳು, ಜ್ಯೋತಿಲಕ್ಷ್ಮಿ ಬಿಂದು ಸಿಂಧು ಪ್ರಧಾನೆ ಇವರು ಉಪಸ್ತಿತರಿದ್ದರು.
ವಲಯಗಳ ಪದಾಧಿಕಾರಿಗಳು, ವಿಭಾಗ ಪ್ರಧಾನರು ಗುರಿಕ್ಕಾರರು, ಶ್ರೀಕಾರ್ಯಕರ್ತರು ಭಾಗವಹಿಸಿದರು.

RELATED ARTICLES  ಅಂತರರಾಷ್ಟ್ರೀಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಬೆಳಗಾವಿಯ ಜಿಐಟಿ ಕಾಲೇಜಿನ ವಿದ್ಯಾರ್ಥಿಗಳು.