ಕುಮಟಾ ; ಸರಕಾರಿ ನೌಕರರು ಎಂದರೆ ವರ್ಗಾವಣೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಇರಬೇಕು. ಹೌದು ಕುಮಟಾ ತಾಲೂಕಿನ ಸಹಾಯಕ ಆಯುಕ್ತರಿಗೆ ವರ್ಗಾವಣೆಯ ಸಮಯ ಕೂಡಿ ಬಂದಿದೆ,ಈ ಸಂಬಂಧ ಕುಮಟಾ ಸಹಾಯಕ ಆಯುಕ್ತರ ಕಛೇರಿಯಲ್ಲಿ ಸಹಾಯಕ ಆಯುಕ್ತರಿಗೆ ಬಿಳ್ಕೊಡುಗೆ ಸಮಾರಂಭ ಮತ್ತು ನೂತನ ಸಹಾಯಕ ಆಯುಕ್ತರಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಮೇಶ ಕಳಸದ ಅವರ ದಿಟ್ಟ ಮತ್ತು ದಕ್ಷ,ಸ್ವಚ್ಚ ಆಡಳಿತದ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಒಬ್ಬಬ್ಬರಂತೆ ತಿಳಿಸುವ ಕಾರ್ಯ ಮಾಡಿದ್ರು..
ಇದೇ ವೇಳೆ ವರ್ಗವಣೆಗೊಂಡ ಸಹಾಯಕ ಆಯುಕ್ತ ರಮೇಶ ಕಳಸದ ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಅತ್ಯಂತ ಸುಂದರವಾದ ಜಿಲ್ಲೆ ಎನ್ನುತ್ತಾ ನಮ್ಮ ಜಿಲ್ಲಾಧಿಕಾರಿಗಳಾದ ನಕುಲ ಅವರ ತಾಳ್ಮೆ ನನಗೆ ಆದರ್ಶವಾಗಿದೆ. ಆದ್ದರಿಂದ ನಾನೂ ಕೂಡ ತಾಳ್ಮೆಯನ್ನು ನನ್ನಲ್ಲಿ ಅಳವಡಿಸಿಕೊಂಡಿದ್ದೇನೆ.ಜೊತೆಗ ಇಲ್ಲಿ ಅಧಿಕಾರಿಗಳು ಕೂಡ ಬಹಳ ಒಳ್ಳೆಯವರು ಎಂದರು..
ನೂತನವಾಗಿ ಆಗಮಿಸಿದ ಸಹಾಯಕ ಆಯುಕ್ತರಾದ ಲಕ್ಷ್ಮೀ ಪ್ರೀಯಾ ಅವರು ಮಾತನಾಡಿ ತಮ್ಮ ಪರಿಚಯ ಮಾಡಿಕೊಂಡರು ನಂತರ ನಮಗೂ ಎಲ್ಲಾರು ಬೆಂಬಲ,ಪ್ರೋತ್ಸಾಹ ನೀಡಬೇಕು ಎಂದರು..
ಕುಮಟಾ ಮತ್ತು ಅಂಕೋಲಾ ವ್ಯಾಪ್ತಿಯ ಕಂದಾಯ ಇಲಾಖೆಯ ಜವಬ್ದಾರಿಯನ್ನು ಹೊತ್ತು ಒಂದು ವರ್ಷದ 4 ತಿಂಗಳು ಕಾಲ ಅಧಿಕಾರ ನಿರ್ವಾಹಿಸಿ ತಮ್ಮದೆ ಆದ ತಾಳ್ಮೆಯ ಆಡಳಿತ ನಡೆಸಿದ ರಮೇಶ ಕಳಸದ ಇನ್ನೊಂದು ಜವಾಬ್ದಾರಿಯನ್ನು ಹೊತ್ತು ಬೇರೊಂದು ಸ್ಥಳಕ್ಕೆ ಹೋರಟಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿಗಳು ಯಾವ ರೀತಿಯಾಗಿ ಕಾರ್ಯನಿರ್ವಾಹಿಸುತ್ತಾರೆ ಎಂದು ಕಾದುನೋಡಬೇಕು..