ಶಿರಸಿ : ಅನಂತ ಕುಮಾರ ಹೆಗಡೆ ರಾಜಕೀಯಕ್ಕೆ ಮರಳಬೇಕು ಎಂಬ ಒತ್ತಡ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸಾರ್ವಜನಿಕರು ಅವರ ಮನೆ ಮುಂದೆ ತೆರಳಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿರುವ ಘಟನೆಯೂ ನಡೆದಿದೆ.

ಕೆಲವು ವಯಕ್ತಿಕ ಕಾರಣಕ್ಕೆ ರಾಜಕೀಯದಿಂದ ದೂರವಿದ್ದಾಗಿತ್ತು. ಸಂಘಟನೆಗೆ ಹೊಸಬರನ್ನು ಹುಡುಕಲು ಸಹ ಹೇಳಾಗಿತ್ತು. ಒಮ್ಮೆಲೆ ಒತ್ತಡ ಹಾಕಿದರೆ ಕಷ್ಟವಾದೀತು. ನಿರ್ಧಾರಕ್ಕೆ ಸಮಯಬೇಕೆಂದು ಅನಂತಕುಮಾರ ಹೆಗಡೆ ಹೇಳಿದರು.

RELATED ARTICLES  ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

ಅವರು ಶಿರಸಿಯಲ್ಲಿ ತಮ್ಮ ಮನೆಗೆ ಆಗಮಿಸಿದ್ದ ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು. ಮನೆಗೆ ಬಂದ ಕಾರ್ಯಕರ್ತರಿಗೆ ರಾಜಕೀಯ ಹೊರತುಪಡಿಸಿ ಮಾತನಾಡಿ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. 6 ಬಾರಿ ಗೆಲ್ಲಿಸಿದ್ದೀರಿ. ಈ ಬಾರಿ ಮತ್ತೊಬ್ಬರನ್ನು ಗೆಲ್ಲಿಸೋಣ. ಪ್ರಧಾನಿ ಮೋದಿಯನ್ನು ಬಹುಮತದಿಂದ ದೇಶಕ್ಕಾಗಿ ಗೆಲ್ಲಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅನೇಕ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬರಕೂಡದು. ನೀವು ಚುನಾವಣೆಗೆ ನಿಂತು, ಮತ್ತೆ ಆರಿಸಿ ಬರಬೇಕು. ನೀವು ನಿರ್ಧಾರ ಬದಲಿಸುವವರೆಗೂ ನಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಸಂಸದರನ್ನು ಆಗ್ರಹಿಸಿದರು.

RELATED ARTICLES  ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು.

ಈ ವೇಳೆ ಶಿರಸಿ, ಸಿದ್ದಾಪುರ, ಮುಂಡಗೋಡು, ಕಿತ್ತೂರು ಭಾಗದ ನೂರಾರು ಅನಂತಕುಮಾರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಇದ್ದರು.