ಕಾರವಾರ : ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಹಿಂಬದಿಯ ಎಕ್ಸೆಲ್ ತುಂಡಾಗಿ ಬಿದ್ದ ಘಟನೆ ಇಲ್ಲಿನ ಹಬ್ಬುವಾಡ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಿಂದ ಕೆಲ ಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

ಕಾರವಾರದಿಂದ ಕೆರವಡಿ ಗ್ರಾಮಕ್ಕೆ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ನ ಹಿಂಬದಿಯ ಆಕ್ಸಲ್ ಏಕಾಏಕಿ ತುಂಡಾಗಿ, ಪಲ್ಟಿಯಾಗುವ ಹಂತದಲ್ಲಿದ್ದ ಬಸ್‌ನ್ನು ಸಾರ್ವಜನಿಕರು ಹಿಡಿದು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

RELATED ARTICLES  ಮಳೆ- ಬಿಸಿಲೆನ್ನದೆ ಕಾರವಾರ ಪ್ರವೇಶ ಮಾಡಿದ ಸ್ವಾಭಿಮಾನಿ ಪಾದಯಾತ್ರೆ: ಗುರುವಾರ ಬೆಳಿಗ್ಗೆ 11 ಘಂಟೆಗೆ ಮನವಿ ಸಲ್ಲಿಕೆ

ವಿಡಿಯೋ

ಈ ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಇನ್ನು ಸುಸ್ಥಿತಿಯಲ್ಲಿರದ ಬಸ್‌ನ್ನು ಬಿಟ್ಟ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

RELATED ARTICLES  ಅಪಘಾತದಲ್ಲಿ ಲಾರಿ ಹರಿದು ಮುಖ್ಯಶಿಕ್ಷಕ ಸಾವು.