ಗೋಕರ್ಣ: ಅಶೋಕೆಯ ಶ್ರೀ ಮಲ್ಲಿಕಾರ್ಜುನನಿಗೆ ಅತಿರುದ್ರ ಅಭಿಷೇಕ ನಡೆದ ಕೊನೆಯ ದಿನ ಗುರು ಪರಂಪರೆಯ ವಿಶೇಷ ಸೇವೆ ನಡೆಯಲಿದೆ. ಜನವರಿ 9ರಂದು ನಡೆಯುವ ಖ್ಯಾಪನಾ ಕಾರ್ಯಕ್ರಮದಲ್ಲಿ ಶ್ರೀ ಶಂಕರರ ಅವಿಚ್ಛಿನ್ನ ಪರಂಪರೆಯ ಎಲ್ಲ ಪೂರ್ವಾಚಾರ್ಯರಲ್ಲಿ ಇಡೀ ಸಮಾಜ ಕ್ಷಮೆಯಾಚನೆ ಮಾಡುವ ಮತ್ತು ಸಾಮೂಹಿಕವಾಗಿ ಗುರು ಅಷ್ಟಕ ಪಠಣ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ನಡೆಯುತ್ತಿರುವ ಅತಿರುದ್ರ ಅಭಿಷೇಕದ ಎಂಟನೇ ದಿನವಾದ ಶನಿವಾರ ಕುಮಟಾ ಮಂಡಲದ ಶಿಷ್ಯರ ರುದ್ರಸೇವೆ ಸಮರ್ಪಣೆಯ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಮೂಲಮಠದ ಪುನರುತ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಕಾಸಕ್ಕೆ ಅಶೋಕೆಯ ಮೂಲವಾದ ಮಲ್ಲಿಕಾರ್ಜುನನ ಕೃಪೆ ಬೇಕು. ಮಲ್ಲಿಕಾರ್ಜುನ ನಮ್ಮ ಸೇವೆಯಿಂದ ಸಂತೃಪ್ತನಾಗಿ ಮಳೆ ಸುರಿಸಿದ್ದಾನೆ. ನಮಗೆ ಕರುಣೆಯ ಮಳೆಯನ್ನೂ ಹರಿಸಿ, ಎಲ್ಲ ಕಷ್ಟ ಕೋಟಲೆಗಳು ತೊಳೆದುಹೋಗಲಿ ಎಂದು ಆಶಿಸಿದರು.

RELATED ARTICLES  ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ : ವಿನಾಯಕ ಪ್ರಭು.


ಇಡೀ ಸಮಾಜ ಆತನ ಕರುಣೆಯಿಂದ ತಂಪಾಗಿ, ಹಸಿರಾಗಿ ನಳನಳಿಸಬೇಕು. ಕರೆದಾಗ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡಬಹುದು. ಶಿವ ಮಳೆಯ ರೂಪದಲ್ಲಿ ಅನುಗ್ರಹಿಸಿದ್ದಾನೆ. ಶಿವನಿಗೆ ಎರೆದ ಗಂಗೆ ಆತನ ಪಾದವಾದ ಭೂಮಿಯನ್ನು ತಂಪಾಗಿಸಿದ್ದಾಳೆ. ಪ್ರತಿಕೂಲಗಳ ನಡುವೆ ನಾವು ಸಲ್ಲಿಸುವ ಸೇವೆಗೆ ಫಲ ಅಧಿಕ. ನೆನೆದ ನೆಲ ಮತ್ತು ನೆನೆದ ಮನದಲ್ಲಿ ಸೇವೆ ಸಲ್ಲಿಸುವುದು ನಿಜಕ್ಕೂ ಅಪೂರ್ವ ಎಂದು ಬಣ್ಣಿಸಿದರು.

RELATED ARTICLES  ಉಚಿತ ಕಣ್ಣಿನ ತಪಾಸಣಾ ಶಿಬಿರ ಸಂಪನ್ನ.


ವಿವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ,  ವಿದ್ವಾನ್ ಸತ್ಯನಾರಾಯಣ ಶರ್ಮ, ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ರಮಣ ಭಟ್ ಮುಂಬೈ, ಮನೋರಂಜಿನಿ, ಕುಮಟಾ ಮಂಡಲ ಅಧ್ಯಕ್ಷ ಮುರೂರು ಸುಬ್ರಾಯ ಭಟ್, ವ್ಯವಸ್ಥಾ ಪರಿಷತ್ ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀವತ್ಸ ಮುರುಗೋಡು, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು.