ಕುಮಟಾ : ಬೀದರ್ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 22ನೇ ರಾಜ್ಯ ಮಟ್ಟದ ವುಶು ಚಾಂಪಿಯನ್ ಶಿಪ್‍ನಲ್ಲಿ ವುಶು ಅಸೋಸಿಯೇಷನ್‍ನಿಂದ ಆಯ್ಕೆಯಾದ ರಾಯಲ್ ಅಕಾಡೆಮಿಯ ವಿದ್ಯಾರ್ಥಿನಿ ಕೋಡ್ಕಣಿಯ ಧ್ವನಿ ಕುಮಾರ ನಾಯ್ಕ ವುಶು ಶಾನ್ಸು ಸಬ್ ಜೂನಿಯರ್ 27 ಕೆ.ಜಿ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಧ್ವನಿ ಕುಮಾರ ನಾಯ್ಕ ಕುಮಟಾ ತಾಲೂಕಿನ ಕೋಡ್ಕಣಿಯ ಕುಮಾರ ರಾಮಾ ನಾಯ್ಕ ಹಾಗೂ ಸುವರ್ಣ ನಾಯ್ಕ ದಂಪತಿಯ ಪುತ್ರಿಯಾಗಿದ್ದು, ಸಧ್ಯ ಹೊನ್ನಾವರ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಧ್ವನಿ ಕುಮಾರ ನಾಯ್ಕ ಇವಳು ಉತ್ತರ ಕನ್ನಡ ಜಿಲ್ಲೆಯ ವುಶು ಅಸೋಸಿಯೇಷನ್ ಹೊನ್ನಾವರ ರಾಯಲ್ ಅಕಾಡೆಮಿಯ ರಾಘವೇಂದ್ರ ಆರ್. ಅವರಿಂದ ತರಬೇತಿ ಪಡೆದಿದ್ದಾಳೆ. ಇವಳ ಸಾಧನೆಗೆ ಪಾಲಕರು, ಊರನಾಗರಿಕರು, ವುಶು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ರಾಜ್ಯ ತರಬೇತುದಾರರು, ರಾಷ್ಟ್ರೀಯ ತೀರ್ಪುದಾರರಾದ ರಾಘವೇಂದ್ರ ಆರ್ ಮತ್ತು ಜಿಲ್ಲೆಯ ವುಶು ಅಸೋಸಿಯೇಷನ್ ಅಧ್ಯಕ್ಷ ಸತ್ಯಾ ಜಾವಗಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.