ಕುಮಟಾ  : ವಾಹನ ಸವಾರರಿಗೆ ಮಾರ್ಗದರ್ಶಿಯಾಗುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಪೋಲೀಸರಿಗೆ ವಿವಿಧ ಪರಿಸ್ಥಿತಿಯಲ್ಲಿ ಅತ್ಯುಪಯುಕ್ತವಾಗುವ ಬ್ಯಾರಿಕೇಡ್ ಗಳನ್ನು ನೀಡುವುದರ ಮೂಲಕ ಹಳದೀಪುರ ಗ್ರಾಮ‌ ಪಂಚಾಯತ ಮಾದರೀ ಕಾರ್ಯಕ್ಕೆ‌ ಮುಂದಾಗಿದೆ. 

ಸದಾ ಕಾಲ ಒಂದಿಲ್ಲೊಂದು ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿರುವ ಹಳದಿಪುರ ಗ್ರಾಮ ಪಂಚಾಯತ್ ಇದೀಗ ಜನಾನುರಾಗಿ ಕಾರ್ಯಕ್ಕೆ ಮುಂದಾಗಿದೆ. ಗ್ರಾಮದ ಅಭಿವೃದ್ಧಿ ಹಾಗೂ ಜನತೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಸದಾ ಮುಂದಿರುವ ಗ್ರಾಮ ಪಂಚಾಯತ್ ಪದಾಧಿಕಾರಿಗಳು, ಈ ಕಾರ್ಯದಿಂದ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಬೃಹತ್ ಶೋರೂಮ್ ಉದ್ಘಾಟನೆ

ಹಳದೀಪುರ ವ್ಯಾಪ್ತಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕೆಯಾಗಿ, ವೇಗ ನಿಯಂತ್ರಕವಾಗಿ ಹಾಗೂ ಜನನಿಬಿಡ ಪ್ರದೇಶದಲ್ಲಿ  ಜನರನ್ನು ನಿಯಂತ್ರಿಸಲು ತೀರಾ ಅಗತ್ಯವಾಗಿರುವ ೧೦ ಬ್ಯಾರಿಕೇಡನ್ನು ಸಮಾಜಮುಖಿ ಚಿಂತನೆಯೊಂದಿಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಗ್ರಾ.ಪಂ ವತಿಯಿಂದ ನೀಡಿದ್ದಾರೆ. ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬ್ಯಾರಿಕೇಡನ್ನು ಇವರು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಜಿತ ನಾಯ್ಕ, ಬ್ಯಾರಿಕೇಡ್ ಗಳು ಹಳದೀಪುರದಲ್ಲಿ ಅಗತ್ಯವಿದೆ ಎಂಬುದನ್ನು ಮನಗಂಡು ಗ್ರಾ.ಪಂ ಈ ಕಾರ್ಯಕ್ಕೆ ಮುಂದಾಗಿದೆ. ಸಾರ್ವಜನಿಕರಿಗೆ ಹಾಗೂ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾರಿಕೆಟ್ ಗಳನ್ನು ನೀಡಿದ್ದು, ಇದರ ಸದುಪಯೋಗವಾಗುವಂತಾಗಲಿ ಎಂದು ಎಂದು ಅಭಿಪ್ರಾಯಪಟ್ಟರು.

RELATED ARTICLES  ಮೇ ೧೦ ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ನಾಯ್ಕ, ಉಪಾಧ್ಯಕ್ಷ ಅಜಿತ ನಾಯ್ಕ ಪಿ.ಡಿ.ಓ ಜಿ.ಎಲ್ ನಾಯ್ಕ ಹಾಗೂ ಗ್ರಾ.ಪಂ ನ ಇತರ ಸದಸ್ಯರುಗಳು ಹಾಜರಿದ್ದರು.