ಹೊನ್ನಾವರದ ಹೊಸಾಕುಳಿಯ ಸಾಹಿತಿ ಶಿಕ್ಷಕರಾದ ಸಂದೀಪ ಭಟ್ಟರ 25 ನೇ ಕೃತಿ ಗೆಲುವಿನ ಹೆಜ್ಜೆ ನಾಳೆ ಅವರ ಸ್ವಗೃಹ ಶ್ರೀಧರಾನುಗ್ರಹ ದಲ್ಲಿ ಬಿಡುಗಡೆಯಾಗಲಿದೆ. ಅನೇಕ ಖ್ಯಾತನಾಮರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ರಜತಗರಿ ಸ್ನೇಹಸಿರಿ ನಾದಲಹರಿ ಕಾರ್ಯಕ್ರಮ ಸುಸಂಪನ್ನಗೊಳ್ಳಲಿಕ್ಕಿದೆ. ಕೃತಿಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ದಿನಕರ ಶೆಟ್ಟಿಯವರು ಲೋಕಾರ್ಪಣೆಗೊಳಿಸಲಿಕ್ಕಿದ್ದು ರಜತ ಸಂಭ್ರಮದ ಹೊಸ್ತಿಲಲ್ಲಿರುವ ಸಾಹಿತಿ ಸಂದೀಪ ಭಟ್ಟರ ಗೆಲುವಿನ ಹೆಜ್ಜೆ ಕೃತಿಯನ್ನು ಗಣೇಶ ಜೋಷಿ ಸಂಕೊಳ್ಳಿಯವರು ಪರಿಚಯಿಸಲಿಕ್ಕಿದ್ದಾರೆ. ಶ್ರೀಯುತ ಗಜಾನನ ಹೆಬ್ಬಾರ ಭಟ್ಕಳ, ಶ್ರೀಯುತ ಶಂಕರ ಹೆಗಡೆ ಹಿರೇಮಕ್ಕಿ, ಶ್ರೀಯುತ ಶೇಷಾದ್ರಿ ಅಯ್ಯಂಗಾರ, ಕುಮಾರಿ ಅಂಜನಾ ಶಿರಸಿ, ಕುಮಾರಿ ನಿಹಾರಿಕಾ ಭಟ್ಟ ಇವರು ನಾದಲಹರಿ ಹರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಯುತ ಪಿ.ಕೆ.ಹೆಗಡೆ ಹರಿಕೇರಿಯವರ ಸಂಯೋಜನೆಯಲ್ಲಿ ಶ್ರೀ ಗಣೇಶ ಗಾಂವಕರ ಕನಕನಹಳ್ಳಿ ಮತ್ತು ಮಯೂರ ಹೆಗಡೆ ಹರಿಕೇರಿ ಇವರ ಚಂಡೆಯ ಝೇಂಕಾರ ಮೊಳಗಲಿಕ್ಕಿದೆ. ಸಹೃದಯರು ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

RELATED ARTICLES  ಹೊನ್ನಾವರ-ಮಲ್ಲಾಪುರ ರಸ್ತೆಯ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಅರೆಅಂಗಡಿಯಲ್ಲಿ ಗುದ್ದಲಿಪೂಜೆ