ಕುಮಟಾ : ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ರಂಗದಾಸ ಶಾನಭಾಗ ಹೆಗಡೆಕರ ಬಾಲ ಮಂದಿರದ ಪುಟಾಣಿಗಳು‌ ಹೊರಸಂಚಾರ ಕಾರ್ಯಕ್ರಮದ ‌ನಿಮಿತ್ತ ಪದವಿಪೂರ್ವ ಕಾಲೇಜಾದ ಬಿ.ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿಗೆ ಭೇಟಿನೀಡಿದರು.

ಈ ಸಂದರ್ಭದಲ್ಲಿ  ವಿಧಾತ್ರಿ ಅಕಾಡೆಮಿಯ ವತಿಯಿಂದ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯವುಳ್ಳ ಕಿರು ಚಲನಚಿತ್ರ ಪ್ರದರ್ಶಿಸಲಾಯಿತು. ಕಾಲೇಜಿನ ಪ್ರಯೋಗಾಲಯದಲ್ಲಿ ಸಂಸ್ಕರಿಸಿಟ್ಟ ಜೀವಿಗಳನ್ನು ಮಕ್ಕಳೆಲ್ಲರೂ ನೋಡಿ ಸಂಭ್ರಮಿಸಿದರು.

RELATED ARTICLES  ರಾಜ್ಯಮಟ್ಟದ ಏಳು ರ್ಯಾಂಕ್ ಗಿಟ್ಟಿಸಿದ ಸಿ.ವಿ.ಎಸ್.ಕೆ ಪ್ರೌಢಶಾಲೆ.

ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ತಿನಿಸು ವಿತರಿಸಿ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ ಭಾರತಮಾತೆಗೆ ಜಯಘೋಷ ಹೇಳುತ್ತ ತಮ್ಮ ಶಾಲೆಗೆ ಹೊರಟರು

ಈ ವೇಳೆ ಉಪಪ್ರಾಚಾರ್ಯೆ ಸುಜಾತಾ ಹೆಗಡೆ, ಉಪನ್ಯಾಸಕರುಗಳಾದ ಗಾಯತ್ರಿ ಕಾಮತ್ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ, ರಮ್ಯಾ ಸಭಾಹಿತ, ಗುರುರಾಜ್ ಶೆಟ್ಟಿ, ಡಾ.ಅವಿನಾಶ್, ಶ್ರೀನಿಧಿ ನಾಯ್ಕ, ನಿತೀಶ್  ಬಾಲಮಂದಿರದ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಹೆಗಡೆ, ಜಯಾಶಾನಭಾಗ, ಸುಜಾತ ನಾಯ್ಕ ರಾಧಿಕಾ ಶಾನಭಾಗ ಜಯಲಕ್ಷ್ಮಿ ಪಟಗಾರ ಜ್ಯೋತಿ ಭಂಡಾರಿ, ರಕ್ಷಾ ಕಿಣಿ ಮುಂತಾದವರಿದ್ದರು.

RELATED ARTICLES  ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.