ಕುಮಟಾ : ಜಿಲ್ಲೆಯ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಶೋರೂಮ್ ಕುಮಟಾದ ತರಂಗ ಇಲೆಕ್ಟ್ರಾನಿಕ್ಸ್, ಫರ್ನಿಚರ್ ಮೇಳ ಹಮ್ಮಿಕೊಂಡಿದ್ದು ಇಂದು ಅದರ ಉದ್ಘಾಟನೆಯನ್ನು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ್ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮೋಹನ ಭಾಸ್ಕರ ಹೆಗಡೆ ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಶ್ರೀಕಾಂತ ಭಟ್ ಮತ್ತು ವಸಂತ ಭಟ್ ಸಹೋದರರನ್ನು ನಾನು ಬಹು ಕಾಲದಿಂದ ಬಲ್ಲೆ. ಗ್ರಾಹಕ ಸ್ನೇಹಿಯಾಗಿರುವ ಅವರು ತರಂಗ ಇಲೆಕ್ಟ್ರಾನಿಕ್ಸ್ ಮೂಲಕ ಉತ್ತಮ ಸೇವೆಯನ್ನು ತಮ್ಮ ಗ್ರಾಹಕರಿಗೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಸದಾ ತಮ್ಮ ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ಒದಗಿಸುತ್ತಿದ್ದಾರೆ. ಇದೀಗ ನವನವೀನ ಮಾದರಿಯ ಆಕರ್ಷಕ ವಿನ್ಯಾಸದ ಅತ್ಯುತ್ತಮ ಗುಣಮಟ್ಟದ ಫರ್ನಿಚರ್ ಗಳನ್ನು ಪರಿಚಯಿಸುತ್ತಿರುವದು ಸಂತಸದ ವಿಷಯ. ಅವರುಗಳಿಗೆ ಶುಭ ಕೋರುತ್ತೇನೆ ಎಂದರು.

RELATED ARTICLES  ರಾಜ್ಯಮಟ್ಟದ ಏಳು ರ್ಯಾಂಕ್ ಗಿಟ್ಟಿಸಿದ ಸಿ.ವಿ.ಎಸ್.ಕೆ ಪ್ರೌಢಶಾಲೆ.

ಆರಂಭದಲ್ಲಿ ಶ್ರೀಕಾಂತ ಭಟ್ ಅವರು ಎಲ್ಲರನ್ನು ಸ್ವಾಗತಿಸಿದರು. ವಸಂತ ಭಟ್ಟ ಅವರು ವಂದಿಸಿದರು. ಜಯಂತ ಭಟ್ಟ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ತರಂಗ ಇಲೆಕ್ಟ್ರಾನಿಕ್ಸ್ ನ ಪಾಲುದಾರರಾದ ಜಯಲಕ್ಷ್ಮೀ ಭಟ್ಟ ಅವರು ಉಪಸ್ಥಿತರಿದ್ದರು.

ಈ ಮೇಳದಲ್ಲಿ ಎಲ್ಲ ರೀತಿಯ ಕುಶನ್ ಸೋಫಾಗಳೊಟ್ಟಿಗೆ ವುಡನ್ ಫರ್ನಿಚರ್ಗಳ ಮೇಲೆ ಒತ್ತು ನೀಡಲಾಗಿದ್ದು ನವನವೀನ ಮಾದರಿಯ ಟೀಕ್, ಅಕೇಶಿಯಾ ಮತ್ತು ಮಹೋಗನಿ ವುಡ್ ಸೋಫಾಗಳು, ಟೀಪಾಯ್ ಗಳು, ಕಾಟುಗಳು, ಡೈನಿಂಗ್ ಟೇಬಲ್ಲುಗಳು ಪಲ್ಲಂಗಗಳು ಪ್ರದರ್ಶನಕ್ಕಿವೆ. ವಿಶೇಷವಾಗಿ ಕೇರಳ ಮಾದರಿಯ ಫರ್ನಿಚರುಗಳು ಉದ್ಘಾಟನೆಯ ಸಮಯದಲ್ಲಿ ಹಾಜರಿದ್ದವರನ್ನು ಬಹುವಾಗಿ ಆಕರ್ಷಿಸಿದವು.

RELATED ARTICLES  ಜೆ.ಇ.ಇ ಮೈನ್ಸ್ ಪೇಪರ್ -೨ ನಲ್ಲಿ ಸೋನಾಲಿ ಶೇಟ್ ಸಾಧನೆ.

ಈ ಮೇಳದಲ್ಲಿ ಗ್ರಾಹಕರಿಗೆ ಶೇಕಡಾ ೪೫ರ ವರೆಗೆ ರಿಯಾಯತಿ ಮಾರಾಟವಿದ್ದು ಉಚಿತ ಹೋಮ್ ಡೆಲಿವರಿ ಕೂಡ ಇದೆ. ಎಲ್ಲ ಖರೀದಿಯ ಒಟ್ಟಿಗೆ ಖಚಿತ ಉಡುಗೊರೆಗಳೂ ಕಾಂಬಿ ಆಫರ್ ಗಳೂ ಇವೆ. ಎಕ್ಸ್ಚೇಂಜ್ ಆಫರ್ ಮತ್ತು ಸುಲಭ ಸಾಲ ಸೌಲಭ್ಯಗಳೂ ಲಭ್ಯವಿದ್ದು ಗ್ರಾಹಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಫರ್ನಿಚರ್ ಮೇಳದ ಸಂಘಕಟರು ಕೇಳಿಕೊಂಡಿದ್ದಾರೆ.