ಕುಮಟಾ : ಇಂದಿರಾಗಾಂಧಿ ಅಂದಿನ ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು, ಆಂದೋಲನದಲ್ಲಿ ಹತ್ತಾರು ಸಂತರೂ ಸತ್ತರು, ಗೋಲಿಬಾರ್ ಕೂಡಾ ನಡೆಯುವಂತಾಗಿತ್ತು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆದು ನೂರಾರು ಗೋವುಗಳನ್ನೂ ಗುಂಡಿಟ್ಟು ಕೊಲ್ಲಲಾಯಿತು. ದೊಡ್ಡ ತಪಸ್ವಿ ಕರಪಾತ್ರಿ ಮಹಾರಾಜರು ಇಂದಿರಾಗಾಂಧಿ ಅವರಿಗೆ ಶಾಪ ಕೊಟ್ಟಿದ್ದರು. ಗೋಪಾಷ್ಠಮಿ ದಿನದಂದೇ ನಿನ್ನ ಕುಲ ನಾಶವಾಗಲಿದೆ ಎಂದು ಶಾಪ ನೀಡಿದರು.ಗೋಪಾಷ್ಠಮಿಯಂದೇ ಒಬ್ಬೊಬ್ಬರು ಅಂತ್ಯವಾದರು.ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಠಮಿಯಂದು ಇಂದಿರಾಗಾಂಧಿಗೆ ಗುಂಡಿಟ್ಟು ಕೊಂದಿದ್ದು ಗೋಪಾಷ್ಠಮಿಯಂದು ಎಂದು ಅವರು ಹೇಳಿದ್ದಾರೆ.
ಇನ್ನು ಅನಂತಕುಮಾರ್ ಹೆಗಡೆ ಕುಮಟಾದ ಹಲವೆಡೆ ರಾಮಮಂದಿರ ಉದ್ಘಾಟನಾ ಅಕ್ಷತೆ ನೀಡಲು ತೆರಳಿದ್ದು, ಅವರ ಆಗಮನ ಹೊಸ ಸಂಚಲನ ಮೂಡಿಸಿದೆ.