ಕುಮಟಾ : ರಾಮಜನ್ಮ ಭೂಮಿ ಪ್ರಾರಂಭ ಮಾತ್ರ, ಇದರ ಜೊತೆಗೆ ಭಟ್ಕಳದ ಚಿನ್ನದ ಪಳ್ಳಿಯೂ ಇದೆ, ಶಿರಸಿಯ ಸಿ.ಪಿ ಬಝಾರ್ ನ ದೊಡ್ಡ ಮಸೀದಿ ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿಯೂ ಮಾರುತಿ ದೇವಸ್ಥಾನ, ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ. ಈ ರಣ ಭೈರವ ಎದ್ದಾಗಿದೆ. ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಸೇಡು..ಸೇಡು…ಸೇಡು… ಸಾವಿರ ವರ್ಷದ ಸೇಡು ತೀರಿಸಿಕೊಳ್ಳದಿದ್ದರೆ, ಇದು ಹಿಂದೂ ರಕ್ತವಲ್ಲ ಎಂದು ಹಿಂದು ಸಮಾಜ ಹೇಳುತ್ತಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಗುಡುಗಿದರು. ಅವರು ಕುಮಟಾದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಭೇಟಿಯ ಸಂದರ್ಭದಲ್ಲಿ ಪತ್ರಕರ್ತರರ ಜೊತೆ ಮಾತನಾಡಿದರು.
ರಾಮ ಮಂದಿರದ ಉದ್ಘಾಟನೆಯ ಈ ಸಂದರ್ಭದಲ್ಲಿ ನಾವು ಸನಾತನವಾದ ಹಿಂದು ಧರ್ಮದ ವೈಭವದ ಪರ್ವ ಕಾಲದಲ್ಲಿ ನಾವಿದ್ದೇವೆ. ರಾಮಮಂದಿರ ಉದ್ಘಾಟನೆಯಿಂದ ಹಿಂದುಗಳು ೫೦೦ ವರ್ಷಗಳಿಂದ ನಡೆಸಿದ ಸಂಘರ್ಷಕ್ಕೆ ಜಯ ಸಿಕ್ಕಂತಾಗಿದೆ. ಇದು ಪ್ರಾರಂಭವಷ್ಟೇ ಆಗಿದ್ದು, ಮುಂದೆ ದೇಶದಲ್ಲಿರುವ ಇಂತಹ ಅಪಮಾನದ ಸಂಕೇತಗಳು ಅಳಿಸಿ ಹಾಕುವವರೆಗೆ ಈ ಸಂಘರ್ಷ ಮುಂದುವರಿಯಲಿದೆ. ಇದನ್ನು ಬೆದರಿಕೆ ಎಂದು ಬೇಕಿದ್ದರೂ ತಿಳಿದುಕೊಳ್ಳಬಹುದು ಎಂದು ಅವರು ಗುಡುಗಿದರು.